ಕಾರವಾರ: ಒಂದೆಡೆ ಕೊರೋನಾ ಪಾಸಿಟೀವ್ ಸಂಖ್ಯೆ ಏರಿಕೆಯಾದರೆ ಇನ್ನೊಂದೆಡೆ ಸಂತಸದ ಸುದ್ದಿಗಳೂ ಬರುತ್ತುದೆ.
ಕರೋನಾ ಸೊಂಕಿನಿಂದ ಗುಣಮುಖರಾದ ಜಿಲ್ಲೆಯ ಆರು ಜನರನ್ನು ಇಂದು ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡನಿಂದ ಬಿಡುಗಡೆ ಮಾಡಲಾಗಿದೆ. ಇದು ಜಿಲ್ಲೆಯ ಜನತೆಗೆ ಸಂತಸ ತಂದಿದೆ.
ಮೇ 18 ರಂದು ದಾಖಲಾಗಿದ್ದ 28 ವರ್ಷದ ಮಹಿಳೆ ,36 ವರ್ಷದ ಮಹಿಳೆ, 40 ವರ್ಷದ ಹಾಗು37 ವರ್ಷದ ಪುರುಷ,ಭಟ್ಕಳದ 27ವರ್ಷದ ಪುರುಷ , ಮೇ.14 ರಂದು ದಾಖಲಾಗಿದ್ದ ಕುಮಟಾ ಮೂಲದ 26 ವರ್ಷದ ವ್ಯಕ್ತಿ ಇಂದು ಬಿಡುಗಡೆಯಾಗಿದ್ದಾರೆ.
ಮಾಹಿತಿ : ಸಾಂದರ್ಭಿಕ ಚಿತ್ರ ಬಳಸಿದೆ.