ಕಾರವಾರ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜಿಲ್ಲೆಯಲ್ಲಿ ಈಗಾಗಲೆ ಮಳೆ‌ಸುರಿಯುತ್ತಿದ್ದು ಇನ್ನೂ ಹೆಚ್ಚಿನ  ಮಳೆಯವಾಗುವ ಸಾಧ್ಯತೆ ಇದೆ.

ಕಳೆದ 2 ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಇಂದು ಮತ್ತು ನಾಳೆ ಸಹ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜೊತೆಗೆ ಗಂಟೆಗೆ 50 ರಿಂದ 60 ಕಿಲೋ ಮೀಟರ್ ವೇಗವಾಗಿ ಗಾಳಿ ಬೀಸಲಿದೆ. ಸಮುದ್ರದ ಅಲೆಗಳು 2.6- 3.8 ಮೀ ಎತ್ತರ ಉಂಟಾಗುವ ಸಾಧ್ಯತೆಗಳಿದೆ.

RELATED ARTICLES  ನೂತನ ಒಕ್ಕೂಟದ ಪದಗ್ರಹಣ ಸಮಾರಂಭ ಸಂಪನ್ನ.

ಜಿಲ್ಲಾಡಳಿತ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಕರಾವಳಿ ಭಾಗದಲ್ಲಿ ಹೈ-ಅಲರ್ಟ್ ಘೋಷಿಸಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಜೊತೆಗೆ ಪ್ರಕೃತಿ ವಿಕೋಪದ ಯಾವುದೇ ಸಮಸ್ಯೆಯಾದರೂ ಕಂಟ್ರೋಲ್ ರೂಂ 1077 ಅಥವಾ 9483511015 ಗೆ ಕರೆ ಮಾಡಲು ಸೂಚಿಸಿದೆ.

RELATED ARTICLES  ಕಬ್ಬಿನಗದ್ದೆಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ.