ಕುಮಟಾ: ಇಲ್ಲಿಯ ಪ್ರತಿಷ್ಠಿತ ರೋಟರಿ ಕ್ಲಬ್‍ನ ನೂತನ ರೋಟರಿ ವರ್ಷದ ಪದಾಧಿಕಾರಿಗಳ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಶಶಿಕಾಂತ ಕೊಳೆಕರ, ಕಾರ್ಯದರ್ಶಿಯಾಗಿ ಔಷಧೋದ್ಯಮಿ ಅತುಲ್ ಕಾಮತ್ ಹಾಗೂ ಖಜಾಂಚಿಯಾಗಿ ಕೈಗಾರಿಕೋದ್ಯಮಿ ಕಿರಣ ನಾಯಕ ಸರ್ವಸದಸ್ಯರ ಒಪ್ಪಿಗೆಯಂತೆ ಆಯ್ಕೆಯಾಗಿದ್ದಾರೆ. ಅವರ ಕಾರ್ಯಾವಧಿ ಜು.1, 2020ರಿಂದ ಜೂ.30, 2021 ರೋಟರಿ ವರ್ಷದಂತೆ ಇರುತ್ತದೆ ಎಂದು ರೋಟರಿ ಅಧ್ಯಕ್ಷ ಸುರೇಶ ಭಟ್ ತಿಳಿಸಿದ್ದಾರೆ.
ಅಂತೆಯೇ, ರೋಟರಿ ಏನ್ಸ್ ಅಧ್ಯಕ್ಷರಾಗಿ ಏನ್ ಸೊನಾಲಿ ಶಶಿಕಾಂತ ಕೊಳೇಕರ, ಕಾರ್ಯದರ್ಶಿಯಾಗಿ ಏನ್ ಮೇಧಾಶ್ರೀ ಅತುಲ್ ಕಾಮತ್ ಹಾಗೂ ಖಜಾಂಚಿಯಾಗಿ ಏನ್ ದೀಪಾ ಕಿರಣ ನಾಯಕ ನೇಮಕಗೊಂಡಿದ್ದಾರೆ.