ಕುಮಟಾ ತಾಲೂಕಿನ ಕಾಗಾಲ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ಬರುವ ಲೋಕೇಶ್ವರ ಗೌಡರ ಕೇರಿಯ ಬಳಿ ಕುಮಟಾ ಕ ಅಘನಾಶಿನಿ ಮುಖ್ಯ ರಸ್ತೆಯ ಪಕ್ಕದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತ ಮರವೊಂದು ಬಿರುಗಾಳಿಗೆ ಮುರಿದು ಬೀಳುವ ಸ್ಥಿತಿಯಲ್ಲಿದೆ.

ಒಂದು ವೇಳೆ ಈ ದುರ್ಘಟನೆ ಸಂಭವಿಸಿದರೆ ಅಕ್ಕ ಪಕ್ಕದ ಮನೆಮಾರುಗಳಿಗೆ ಹಾನಿ ಉಂಟಾಗಲಿದ್ದು ಮರದ ಕೆಳಗಡೆಯೇ ಹಾದುಹೋಗಿರುವ ವಿದ್ಯುತ್ ತಂತಿಗಳು ಹರಿದು ಬೀಳಲಿದ್ದು ಎರಡುಮೂರು ವಿದ್ಯುತ್ ಕಂಭಗಳೂ ಮುರಿದು ಅಪಾರ ಹಾನಿ ಉಂಟಾಗಲಿದೆ.ಈಗಾಗಲೇ ಮರದ ಮಾಲಿಕರು ಮರವನ್ನು ವಿಕ್ರಯಮಾಡಿದ್ದು ಖರೀದಿಸಿದವರಿಗೆ ವಿದ್ಯುತ್ ಇಲಾಖೆಯವರು ಮರಕಡಿಯಲು ವಿದ್ಯುತ್ ತಂತಿಗಳನ್ನು ತೆರವುಗೊಳಿಸಿಕೊಡಬೇಕಿದೆ ಎಂದುಹೇಳಲಾಗುತ್ತಿದೆ.

RELATED ARTICLES  ಅಂಚೆ ಕಾರ್ಡಿನಲ್ಲಿ ರಾಜ್ಯ ಮಟ್ಟದ ಕವನ ಸ್ಪರ್ಧೆ : ಉದಯಕಿರಣ ಬಿ. ಪ್ರಥಮ.

ಆದಷ್ಟು ಬೇಗನೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಪಾಯ ಸಂಭವಿಸುವ ಮೊದಲು ಸಂಭಂದಿಸಿದವರು ಎಚ್ಚೆತ್ತುಕೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ ಆಗಿದೆ.

RELATED ARTICLES  ಸಮುದ್ರದಲ್ಲಿ ಮುಳುಗಿ ಪ್ರವಾಸಿಗ ಸಾವು : ಗೋಕರ್ಣದಲ್ಲಿ ನಡೆದ ದುರ್ಘಟನೆ