ಅಂಕೋಲಾ : ತಾಲೂಕಿನಲ್ಲಿ ಜನತೆಯ ಬೇಡಿಕೆ ಹಾಗೂ ಸರಕಾರದ ಯೋಜನೆಯಾಗಿದ್ದ ಇಂದಿರಾ ಕ್ಯಾಂಟಿನ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಶಾಸಕಿ ರೂಪಾಲಿ ನಾಯ್ಕ ಇಂದು ಉದ್ಘಾಟನೆ ನೆರವೇರಿಸಿದರು.

ಯೋಜನೆ ಯಾವುದೇ ಇದ್ದರೂ ಅದನ್ನು ಉತ್ತಮವಾಗಿ ನಡೆಸಿಕೊಂಡು ಹೋಗಬೇಕು. ಬಡವರಿಗಾಗಿ ಈ ಕ್ಯಾಂಟಿನ್‌ ಸಹಕಾರಿಯಾಗಿದೆ. ಸ್ಥಳೀಯರು, ಬಡವರು,ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಭಿಪ್ರಾಯಪಟ್ಟರು.

RELATED ARTICLES  ಹೊನ್ನಾವರದಲ್ಲಿ ಉತ್ತರ ಕನ್ನಡ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿ ಒಳಗಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟ ಸಂಪನ್ನ.

ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಜಗದೀಶ್ ನಾಯಕ, ತಾ.ಪಂ. ಸದಸ್ಯರು, ಪುರಸಭೆ ಸದಸ್ಯರಾದ ತಾರಾ ನಾಯ್ಕ, ರೇಖಾ ಗಾಂವಕರ, ಶೀಲಾ ಶೆಟ್ಟಿ, ಜಯಾ ನಾಯ್ಕ, ಶಾಂತಲಾ ನಾಡಕರ್ಣಿ, ಮುಖಂಡರಾದ ರಾಜೇಂದ್ರ ನಾಯಕ, ಚಂದ್ರಕಾಂತ ನಾಯ್ಕ, ಬಾಲಕೃಷ್ಣ ನಾಯ್ಕ, ಇಲಾಖೆ ಅಧಿಕಾರಿಗಳು, ಸ್ಥಳೀಯ ಕಾರ್ಯಕರ್ತರು, ನಾಗರಿಕರು ಹಾಜರಿದ್ದರು.

RELATED ARTICLES  ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ನಿಧಿ ಸಾಧನೆ.