ಭಟ್ಕಳ:ಜಿಲ್ಲೆಯಲ್ಲಿ ಇಂದು ಏಳು ಮಂದಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ರಾಜ್ಯ ಹೆಲ್ತ್ ಬುಲೆಟಿನ್ ಖಚಿತಪಡಿಸಿದೆ. ರಾಜ್ಯ ಬುಲೆಟಿನ್ ಪ್ರಕಾರ ಸೋಂಕಿತರ ಸಂಖ್ಯೆ 92ಕ್ಕೆ ಏರಿದೆ.

ಸದ್ಯ ಕರೋನಾ ಮುಕ್ತವಾಗಿದ್ದ ಭಟ್ಕಳಕ್ಕೆ ಇಂದು ಇನ್ನೊಂದು ಹೊಸ ಪ್ರಕರಣ ಸೇರ್ಪಡೆಯಾಗಿದೆ. ಭಟ್ಕಳದ ಮುಗ್ದಮ್ ಕಾಲೋನಿ ಮೂಲದ ಓರ್ವ ಯುವತಿಯಲ್ಲಿ ಪ್ರಕರಣ ಪತ್ತೆಯಾಗಿದ್ದು ಈಕೆ ಮೇ 31 ರಂದು ಆಂಧ್ರಪ್ರದೇಶದ ವಿಜಯವಾಡದಿಂದ ವಾಪಸ್ಸಾಗಿದ್ದ 29 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ. ಈಕೆ ವಿಜಯವಾಡದಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದು, ಅಲ್ಲಿ ಹೋಟೆಲ್ ವೊಂದರಲ್ಲಿ ವಾಸ್ತವ್ಯ ಹೂಡಿ, ಬಳಿಕ ಕುಂದಾಪುರದವರೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿ, ಭಟ್ಕಳಕ್ಕೆ ಈಕೆ ಟ್ಯಾಕ್ಸಿಯಲ್ಲಿ ಬಂದಿದ್ದರು.ನಂತರ ಗಂಟಲು ದ್ರವ ಪರೀಕ್ಷೆ ನಡೆಸಿ ಹೋಂ ಕ್ವಾರೆಂಟೈನಲ್ಲಿದ್ದರು.

RELATED ARTICLES  ಶರಾವತಿ ನದಿ ತೀರದ ಜನರು ತಮ್ಮ ಜನ ಜಾನುವಾರು ಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಯಲ್ಲಾಪುರದಲ್ಲಿ ನಿನ್ನೆ ದೃಢಪಟ್ಟಿದ್ದ ಐದು ಪ್ರಕರಣ ಹಾಗೂ ಇಂದು ಜಿಲ್ಲೆಯಲ್ಲಿ ದೃಢಪಟ್ಟ ಪ್ರಕರಣಗಳ ಪೈಕಿ ಎರಡನ್ನು ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ಖಚಿತಪಡಿಸಲಾಗಿದೆ.

ಮಹಾರಾಷ್ಟ್ರದಿಂದ ಮೇ ತಿಂಗಳ ಮೂರನೇ ವಾರದಲ್ಲಿ 14 ಮಂದಿ ಯಲ್ಲಾಪುರಕ್ಕೆ ವಾಪಸ್ಸಾಗಿದ್ದರು. ಅವರನ್ನು ಕ್ವಾರಂಟೈನ್ ನಲ್ಲಿಡಲಾಗಿತ್ತು. ಈ ವೇಳೆ ಗಂಟಲಿನ ದ್ರವ ಕಳುಹಿಸಿದವರ ಪೈಕಿ ಓರ್ವನಿಗೆ ಸೋಂಕು ದೃಢಪಟ್ಟು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್ ಗೆ ಚಿಕಿತ್ಸೆಗೆ ಕಳುಹಿಸಲಾಗಿತ್ತು.

RELATED ARTICLES  ಅರಣ್ಯದಲ್ಲಿ ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ : ಪೊಲೀಸರಿಂದ ತನಿಖೆ ಚುರುಕು

ಎಂಟು ವರ್ಷದ ಬಾಲಕ, 62 ವರ್ಷದ ಪುರುಷ, 25 ವರ್ಷದ ಯುವತಿ ಹಾಗೂ 10 ವರ್ಷದ ಬಾಲಕಿ ಒಂದೇ ಕುಟುಂಬದವರಾಗಿದ್ದು, ಇವರ ಸಂಬಂಧಿ 22 ವರ್ಷದ ಯುವಕನಲ್ಲಿ ನಿನ್ನೆ ಸೋಂಕು ದೃಢಪಟ್ಟಿತ್ತು. ಜತೆಗೆ, ಇಂದು ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಯಲ್ಲಾಪುರ ಮೂಲದ 49 ವರ್ಷದ ಪುರುಷನಲ್ಲೂ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಬುಲೆಟಿನ್ ನಲ್ಲಿ ಖಚಿತಪಡಿಸಿದೆ.