ಹೊನ್ನಾವರ : ತಾಲೂಕಿನ ಜನರ ಬಹುದಿನದ ಬೇಡಿಕೆಯಾಗಿ ಇದೀಗ ಪ್ರಾರಂಭಗೊಂಡಿರುವ ಹೊಸ ಬಸ್ ನಿಲ್ದಾಣ ಕಾಮಗಾರಿಯನ್ನು ಶಾಸಕರಾದ ದಿನಕರ ಶೆಟ್ಟಿ ವೀಕ್ಷಿಸಿದರು.
ಪಟ್ಟಣದ ಹಳೆಯ ಬಸ್ ಸ್ಟ್ಯಾಂಡ್ ಕಟ್ಟಡ ತೆರವು ಕೆಲಸ ವೀಕ್ಷಿಸಲು ಶಾಸಕ ದಿನಕರ ಶೆಟ್ಟಿ ಆಗಮಿಸಿದ್ದರು. ಒಂದು ವರ್ಷದೊಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.
ಕೊರೋನಾ ಹಿನ್ನೆಲೆ ಎರಡು ತಿಂಗಳು ಕಾಲ ಹಳೇ ಕಟ್ಟಡ ತೆರವು ಮಾಡಲು ಆಗಿರಲಿಲ್ಲ, ಈಗ ಕೆಲಸ ಪ್ರಾರಂಭ ಆಗಿದೆ ಹಾಗೂ ಒಂದು ವರ್ಷದಲ್ಲೇ ನೂತನ ಕಟ್ಟಡ ನಿರ್ಮಾಣ ಕೆಲಸ ಮುಗಿಸುವ ಪ್ರಯತ್ನದಲ್ಲಿದ್ದೇವೆ ಎಂದೂ ಈ ಸಂದರ್ಭದಲ್ಲಿ ತಿಳಿಸಿದರು.
ಹೊನ್ನಾವರಕ್ಕೆ ನೂತನ ಬಸ್ ಸ್ಟ್ಯಾಂಡ್ ಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಇತ್ತು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡವಾದ್ದರಿಂದ, ಹೊಸ ಬಸ್ ಸ್ಟ್ಯಾಂಡ್ ನಿರ್ಮಾಣಕ್ಕೆ ಸುಮಾರು 5-6 ಕೋಟಿ ವೆಚ್ಚ ಅಂದಾಜು ಮಾಡಿ, ಸಾರಿಗೆ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಯವರನ್ನು ಭೇಟಿ ಮಾಡಿ ಹಣ ಮಂಜೂರು ಮಾಡಿಸಿ ತಂದಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದ್ದಾರೆ.