ಕಾರವಾರ: ಉತ್ತರ ಕನ್ನಡಿಗರಿಗೆ ಇಂದು ಒಂದೆಡೆ ಸಂತಸ ಇನ್ನೊಂದೆಡೆ ನೀವಿನ ಸುದ್ದಿಯಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಮಂದಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಕೊರೋನಾ ದೃಢಪಟ್ಟ ಒಟ್ಟು 39 ಮಂದಿ ಕ್ರಿಮ್ಸ್ ನ ಕೋವಿಡ್- 19 ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ ಕುಂದಾಪುರದ ಒಂದು ವರ್ಷದ ಗಂಡು ಮಗು, 35 ವರ್ಷದ ಮಹಿಳೆಯನ್ನೂ ಸೇರಿದಂತೆ 18 ಮಂದಿ ಗುಣಮುಖರಾಗಿದ್ದು, ಪ್ರಯೋಗಾಲಯದ ವರದಿ ನೆಗೆಟಿವ್ ಬಂದಿದೆ.

RELATED ARTICLES  ಭಟ್ಕಳದಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣು

ಅದರ ಜೊತೆಗೆ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಪ್ರಕರಣ ವರದಿಯಾಗಿದೆ. 34 ವರ್ಷದ ಪುರುಷ, ಪೇಷೆಂಟ್ ಸಂಖ್ಯೆ 5000 ಹಾಗೂ 61 ವರ್ಷದ ಮಹಿಳೆ, ಪೇಷೆಂಟ್ ಸಂಖ್ಯೆ 5001ರಿಗೆ ಕೊರೊನಾ ಫಾಸಿಟಿವ್ ಬಂದಿದ್ದು
ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರು ಸೋಂಕಿತರು ಕ್ವಾರಂಟೈನ್‌ನಲ್ಲಿದ್ದರು. ಇದೀಗ ಇವರಲ್ಲಿ ಕೊರೊನಾ ಸೋಂಕು ದೃಡಪಟ್ಟಿದೆ.

RELATED ARTICLES  ಗೋವಾದ ಕನ್ನಡಿಗರ ಸಂಘದಿಂದ ಕೊಡಮಾಡಲ್ಪಡುವ ನ್ಯಾಷನಲ್ ಐಕಾನ್ ಅವಾರ್ಡ್ (೨೦೨೨)ಗೆ ಉಮೇಶ ಮುಂಡಳ್ಳಿ ಆಯ್ಕೆ