ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅವರು ಹೃದಯಾಘಾತಕ್ಕೆ ತುತ್ತಾಗಿದ್ದರು. ಇಂತಹ ನಟ ಚಿರಂಜೀವಿ ಸರ್ಜಾ ಅವರನ್ನು, ಕೂಡಲೇ ಅವರನ್ನು ಸಮೀಪದ ಅಪಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ನಟ ಚಿರಂಜೀವಿ ಸರ್ಜಾ(39) ಕೊನೆಯುಸಿರು ಎಳೆದಿದ್ದಾರೆ.


ಇವರನ್ನು ಜನ ‘ಚಿರು’ ಎಂದು ಕರೆಯುತ್ತಾರೆ. ಕನ್ನಡ ಚಲನಚಿತ್ರರಂಗದಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಇವರು ನಟ ದ್ರುವಸರ್ಜಾನ ಅಣ್ಣ ಮತ್ತು ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಸೋದರಳಿಯ ಅಷ್ಟಲ್ಲದೇ ಕನ್ನಡದ ಅನುಭವ ನಟ, ಶಕ್ತಿ ಪ್ರಸಾದ್ ರವರ ಮೊಮ್ಮಗ.
ಇವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಮ್ಮ ಬಾಲ್ಯ ಶಿಕ್ಷಣವನ್ನು ಬಾಲ್ಡ್ವಿನ್ ಬಾಲಕರ ಫ್ರೌಡ ಶಾಲೆಯಲ್ಲಿ ಪೂರ್ಣಗೊಳಿಸಿದರು.
ಇವರು ಸುಮಾರು ೪ ವರ್ಷಗಳಿಂದ ಅವರ ಚಿಕ್ಕಪ್ಪರಾದ ಅರ್ಜುನ್ ಸರ್ಜಾ ರವರ ಸಹಾಯಕ ನಿರ್ದೇಶಕರಾಗಿ ಕೆಲಸವನ್ನು ಮಾಡಿದರು. ಇವರು 2009 ರಲ್ಲಿ ತೆರೆಗೆ ಬಂದ ‘ವಾಯುಪುತ್ರ’ ಎಂಬ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈ ಬಳಿಕ ಸುಮಾರು 22 ಸಿನಿಮಾಗಳಲ್ಲಿ ನಟಿಸಿದ್ದರು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 01-12-2018 ರ ರಾಶಿ ಭವಿಷ್ಯ ಇಲ್ಲಿದೆ.


ಇವರು ಅಕ್ಟೋಬರ್ 2017 ರಲ್ಲಿ ನಟಿ ಮೇಘನಾ ರಾಜ್‌ ಜೊತೆ ನಿಶ್ಚಿತಾರ್ಥ ವನ್ನು ಮಾಡಿಕೊಂಡರು. ಇದಾದ ನಂತರ ಇವರು 2 ಮೇ 2018 ರಲ್ಲಿ ಮದುವೆ ಮಾಡಿಕೊಂಡರು. ಇಂತಹ ನಟ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಠ ನಟನೆಯ ಮೂಲಕ ಗುರ್ತಿಸಿಕೊಂಡಿರುವ ನಟ ಚಿರಂಜೀವಿ ಸರ್ಜಾ(39) ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಅವರನ್ನು ಕೂಡಲೇ ಕುಟುಂಬಸ್ಥರು ಹತ್ತಿರದ ಅಪಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

RELATED ARTICLES  ಮಹಿಳೆಯನ್ನು ಕೊಲೆ ಮಾಡಿ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ್ದ ಪ್ರಕರಣದ ಆರೋಪಿ ಅರೆಸ್ಟ್

Source: online