ಕುಮಟಾ: ಭಾರತೀಯ ಜನತಾ ಪಾರ್ಟಿಯ ಕುಮಟಾ ಮಂಡಲದ ವತಿಯಿಂದ ವಿವಿಧ ಮೋರ್ಚಾ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಭಾನುವಾರ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಯಿತು.

ಯುವ ಮೋರ್ಚಾ ಅಧ್ಯಕ್ಷರಾಗಿ ಜಗದೀಶ ಭಟ್ಟ ದೀವಗಿ, ಹಿಂದುಳಿದ ಮೋರ್ಚಾದ ಅಧ್ಯಕ್ಷರಾಗಿ ವಿಶ್ವನಾಥ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮೋಹಿನಿ ಗೌಡ, ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷರಾಗಿ ಮಂಜುನಾಥ ಮುಕ್ರಿ, ರೈತ ಮೋರ್ಚಾ ಅಧ್ಯಕ್ಷರಾಗಿ ಪರಮೇಶ್ವರ ನಾಯ್ಕ ಸಂತೇಗುಳಿ, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಬಾಳಾ ಡಿಸೋಜಾ ಮಿರ್ಜಾನ ಇವರನ್ನು ಆಯ್ಕೆ ಮಾಡಲಾಯಿತು.

RELATED ARTICLES  ಗ್ಯಾಸ್ ಟ್ಯಾಂಕರ್ ಹಾಗೂ ಸರಕು ಸಾಗಾಣಿಕೆ ವಾಹನ ಮುಖಾಮುಖಿ ಡಿಕ್ಕಿ

ವಿವಿಧ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆಯಾದವರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ ಅಭಿನಂದಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಉಸ್ತುವಾರಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಪ್ರಭಾರಿ ಉಮೇಶ ಭಾಗ್ವತ, ಜಿ.ಪಂ ಸದಸ್ಯ ಗಜಾನನ ಪೈ, ಎಪಿಎಂಸಿ ಅಧ್ಯಕ್ಷ ರಮೇಶ ಪ್ರಸಾದ, ವಿಭಗದ ಪ್ರಮುಖ ವಿನೋದ ಪ್ರಭು, ಪ್ರಮುಖರಾದ ಎಂ.ಜಿ.ಭಟ್ಟ, ಡಾ.ಜಿ.ಜಿ.ಹೆಗಡೆ, ನಾಗರಾಜ ನಾಯಕ ತೊರ್ಕೆ, ಮದನ ನಾಯಕ, ತಾಲೂಕಾ ಕಾರ್ಯದರ್ಶಿ ವಿನಾಯಕ ನಾಯ್ಕ, ಜಿ.ಐ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು

RELATED ARTICLES  ಸಮುದ್ರಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ.