ಶಿಕ್ಷಕರ ನೇಮಕಾತಿ ಪ್ರಕೃಯೆಯಲ್ಲಿ ಇರುವ ಗೊಂದಲಗಳ ಬಗ್ಗೆ ಇಲ್ಲಿದೆ ಮಹಿತಿ.

1)ಪ್ರಾಥಮಿಕ ಶಿಕ್ಷಕರ ನೇಮಕಾತಿ ಇಲ್ಲ.
2)ಡಿ.ಇಡಿ. ಶಿಕ್ಷಣದಲ್ಲಿ ಬೇರೆ ವಿಷಯ, ನೇಮಕಾತಿಯಲ್ಲಿ ಆದೇಶಿಸಿರುವುದು ಬೇರೆ ವಿಷಯ.
3)ವಿವರಣಾತ್ಮಕ ಪರೀಕ್ಷೆ…

ಇವು ಪ್ರಸ್ತುತ ಶಿಕ್ಷಣ ಇಲಾಖೆ ಶಿಕ್ಷಕರ ನೇಮಕಾತಿ ಸಂಬಂಧ ಹೊರಡಿಸಿದ ಆದೇಶದ ಅವೈಜ್ಞಾನಿಕ ಗೊಂದಲಗಳು.

ಶಿಕ್ಷಣ ಇಲಾಖೆ ಸುಮಾರು 3 ವರ್ಷಗಳ ನಂತರ ಶಿಕ್ಷಕರ 10,000 ನೇಮಕಾತಿಗೆ ಆದೇಶ ಹೊರಡಿಸಿದ್ದು, ಆದೇಶದ ಕೆಲವು ವಿಷಯಗಳು ಗೊಂದಲಕ್ಕೀಡಾಗಿವೆ.

ಮೊದಲನೆಯದಾಗಿ ಪ್ರಾಥಮಿಕ ಶಾಲಾ ಶಿಕ್ಷಕರ(1-5) ನೇಮಕಾತಿ ಕೈಬಿಡಲಾಗಿದೆ. ಕೇವಲ ಪದವೀಧರ ಶಿಕ್ಷಕರನ್ನು ಮಾತ್ರ ನೇಮಿಸಲು ಮುಂದಾಗಿದ್ದು ಪಿಯುಸಿ, ಡಿ.ಇಡಿ ಮಾಡಿರುವ ಟಿಇಟಿಯನ್ನೂ ಪಾಸಾಗಿರುವ ಹಲವರು ಇದರಿಂದ ವಂಚಿತರಾಗಲಿದ್ದಾರೆ.

ಎರಡನೆಯದಾಗಿ ಡಿ.ಇಡಿ.ಯಲ್ಲಿರುವ ಬೋಧನಾವಾರು ವಿಷಯಕ್ಕು ಆದೇಶದಲ್ಲಿ ಸೂಚಿಸಿರುವ ವಿಷಯಕ್ಕು ತಾಳೆಯೇ ಇಲ್ಲ. ಡಿ.ಇಡಿ.ಯಲ್ಲಿ ಸಮಾಜ ವಿಜ್ಞಾನ ಮತ್ತು ಗಣಿತವನ್ನು ಒಂದು ಬೋಧನಾ ವಿಷಯವಾಗಿಯು ಹಾಗೂ ವಿಜ್ಞಾನ ಮತ್ತು ಇಂಗ್ಲಿಷ್ ಅನ್ನು ಒಂದು ಬೋಧನಾ ವಿಷಯವನ್ನಾಗಿ ಮಾಡಲಾಗಿದೆ. ಅಲ್ಲದೆ ಈ ವಿಷಯಗಳನ್ನು ಕಲಾ ಮತ್ತು ವಿಜ್ಞಾನ ವಿಷಯಕ್ಕೆ ಯಾವುದೇ ನಿಯಮವಿಲ್ಲದೆ ನೀಡಲಾಗಿದೆ. ಉದಾಹರಣೆಗೆ ಪಿಯುಸಿ ಕಲಾ ವಿಭಾಗದಲ್ಲಿ ಓದಿರುವವರಿಗೆ ಡಿ.ಇಡಿ.ಯಲ್ಲಿ ವಿಜ್ಞಾನ ಮತ್ತು ಇಂಗ್ಲಿಷ್ ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ನೇಮಕಾತಿಯಲ್ಲಿ ಅವಕಾಶ ಇಲ್ಲ. ಇದು ಯಾವ ಸೀಮೆ ನ್ಯಾಯ?

RELATED ARTICLES  ಇಂದಿನ‌ ದಿನ ನಿಮ್ಮ ರಾಶಿ ಫಲ ಹೇಗಿದೆ ಗೊತ್ತೇ? 19/04/2019 ರ ದಿನ ಭವಿಷ್ಯ ಇಲ್ಲಿದೆ.

ಮೂರನೆಯದಾಗಿ ಶಿಕ್ಷಣ ಇಲಾಖೆಯ ನೇಮಕಾತಿ ಇತಿಹಾಸದಲ್ಲೇ ಮೊದಲ ಬಾರಿಗೆ ವಿವರಣಾತ್ಮಕ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಿಂದ ನಾವು ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವೇ? ಅದೂ ಅಲ್ಲದೆ ಪರೀಕ್ಷೆ ನಡೆದು ಆಸುಪಾಸಿನಲ್ಲಿ ಕೆಲಸದಿಂದ ವಂಚಿತರಾಗುವ ಸಂದರ್ಭದಲ್ಲಿ ಅವರು ಅಡ್ಡದಾರಿ (ಭ್ರಷ್ಟಾಚಾರ) ತುಳಿಯುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?
ಅತ್ಯುನ್ನತ ಹುದ್ದೆಯಾದ ಪದವಿ ಕಾಲೇಜು ಉಪನ್ಯಾಸಕರ ಹುದ್ದೆಯ ನೇಮಕಾತಿಯಲ್ಲೇ ಬಹುಆಯ್ಕೆ ಮಾದರಿ ಪ್ರಶ್ನೆ ಇರುವಾಗ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ವಿವರಣಾತ್ಮಕ ಪರೀಕ್ಷೆ ಅವಶ್ಯವೇ? ಅಲ್ಲದೆ ಪರೀಕ್ಷೆಗೆ ಶಿಕ್ಷಣದ ಗುಣಮಟ್ಟ ಕಾಪಾಡಲೆಂದು ಟಿಇಟಿ ಪಾಸಾದವರಿಗೆ ಮಾತ್ರ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಪರೀಕ್ಷೆಗಳ ಮೇಲೆ ಪರೀಕ್ಷೆ ಮಾಡುವುದರಿಂದ ಸಮಯ, ಹಣ ಎಲ್ಲವೂ ವ್ಯರ್ಥವಲ್ಲವೇ?
ಆದ್ದರಿಂದ ಬಹು ಆಯ್ಕೆ ಮಾದರಿ ಪರೀಕ್ಷೆಯು ಪಾರದರ್ಶಕ ಗೆ ಅತ್ಯುತ್ತಮ ಮಾರ್ಗವಾಗಿದೆ.

RELATED ARTICLES  ಆಂಬುಲೆನ್ಸ್‌ಗೆ ದಾರಿ

ಪ್ರಸ್ತುತ ಆದೇಶದಿಂದ ತೊಂದರೆ ಏನು?ಯಾರಿಗೆ?

ಡಿ.ಇಡಿ.ಯಲ್ಲಿ ಸಮಾಜ ವಿಜ್ಞಾನ ಅಧ್ಯಯನ ಮಾಡಿದ್ದು, ಪದವಿಯಲ್ಲಿ ಸಮಾಜ ವಿಜ್ಞಾನ ಅಭ್ಯಸಿಸದವರಿಗೆ ಅರ್ಜಿ ಹಾಕಲು ಅವಕಾಶ ಇಲ್ಲ.

ಡಿ.ಇಡಿ.ಯಲ್ಲಿ ಇಂಗ್ಲಿಷ್ ಅಧ್ಯಯನ ಮಾಡಿದ್ದು ಪದವಿಯಲ್ಲಿ ಇಂಗ್ಲಿಷ್ ಇಲ್ಲದಿದ್ದರೆ ಅವರಿಗೆ ಅವಕಾಶ ಇಲ್ಲ. (ಇಲ್ಲಿ ಗಮನಿಸಬೇಕಾದ ಇನ್ನೊಂದು ದುರಂತದ ಸಂಗತಿ ಏನೆಂದರೆ ಡಿ.ಇಡಿ.ಯಲ್ಲಿ ಶಿಕ್ಷಣ ಇಲಾಖೆಯೇ ಕಲಾ ವಿಭಾಗದವರಿಗೂ ಇಂಗ್ಲಿಷ್ ಮತ್ತು ವಿಜ್ಞಾನ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ ಈಗ ನೇಮಕಾತಿಯಲ್ಲಿ ಕೈ ಬಿಟ್ಟಿದೆ. ಈ ಸಮಸ್ಯೆ ಹೊಂದಿರುವವರು ಹಲವರು ಇದ್ದಾರೆ)_

ಈ ಕೆಳಗಿನ ಅಂಶಗಳನ್ನು ಆದೇಶದಲ್ಲಿ ಮರುಪರಿಶೀಲಿಸಿ, ಮರು ಆದೇಶ ನೀಡಬೇಕು.

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಬೇಕು.

ಡಿ.ಇಡಿ.ಯ ಬೋಧನಾ ವಿಷಯಗಳನ್ನು ನೇಮಕಾತಿಯಲ್ಲಿ ಪರಿಗಣಿಸಬಾರದು. ಮತ್ತು ಪದವಿಯ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳುವುದು.

ವಿವರಣಾತ್ಮಕ ಪರೀಕ್ಷೆ ಕೈ ಬಿಟ್ಟು ಕೇವಲ ಬಹು ಆಯ್ಕೆ ಪ್ರಶ್ನೆ ಮಾದರಿ ಅನುಸರಿಸುವುದು.

ದಯವಿಟ್ಟು ಸಂಬಂಧಿಸಿದವರು ಈ ಕುರಿತು ಯೋಚಿಸಿ ಆದೇಶ ಮರುಪರಿಶೀಲಿಸುವುದು ಒಳಿತು.