ಕುಮಟಾ: ಹೊನ್ನಾವರ ವಿಭಾಗ ಕುಮಟಾ ಉಪ ವಿಭಾಗದ ವತಿಯಿಂದ ಕುಮಟಾ ಪುರಸಭೆಯ ಸಹಕಾರದೊಂದಿಗೆ ವನಮಹೋತ್ಸವ ಕಾರ್ಯಕ್ರಮವನ್ನು ಕುಮಟಾ ತಾಲೂಕಿನ ಹಳಕಾರ ಕ್ರಾಸ್ ಸಮಿಪಿರುವ ಪುರಸಭೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿಯವರು ಮೈದಾನದಲ್ಲಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು, ಅನೇಕ ಭಾಗಗಳಲ್ಲಿ ಗಿಡ ನೆಡುವುದರ ಮೂಲಕ ಅರಣ್ಯ ಇಲಾಖೆಯ ವತಿಯಿಂದ ಉತ್ತಮ ಕಾರ್ಯ ನಡೆಯುತ್ತಿದೆ. ಪರಿಸರವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೊಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ರಾಜ್ಯದಲ್ಲಿ ೮೦ ಶೇಕಡದಷ್ಟು ಅರಣ್ಯ ಹೊಂದಿರುವ ಜಿಲ್ಲೆ ಉತ್ತರ ಕನ್ನಡ ಜಿಲ್ಲೆ ಎಂದು ಹೇಳಲು ಬಹಳ ಹೆಮ್ಮೆ ಎನಿಸುತ್ತದೆ. ಅದಕ್ಕೆ ಮುಖ್ಯ ಕಾರಣ ನಮ್ಮ ಪೂರ್ವಜರು ಅರಣ್ಯದ ಕುರಿತಾಗಿ ಇಟ್ಟಿರುವ ಕಾಳಜಿ ಹಾಗೂ ವಿಚಾರಗಳಿಂದಾಗಿವೆ. ಕುಮಟಾ ಅರಣ್ಯ ಇಲಾಖೆಯ ಅಧಿಕಾರಗಳು ಚಿತ್ರಗಿಯ ಸಮಿಪವಿರುವ ಪುರಸಭೆಯ ಮೈದಾನದಲ್ಲಿ ಅದರಂತೆಯೆ ಇಂದು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆಚ್ಚೆಚ್ಚು ಗಿಡಗಳನ್ನು ಬೆಳೆಸುವ ಜವಬ್ಧಾರಿ ಎಲ್ಲರಮೇಲಿದೆ ಎಂದು ಹೇಳಿದರು.

RELATED ARTICLES  ಪಿಎಸೈ ಹೆಸರಿನಲ್ಲಿಯೇ ನಕಲಿ ಖಾತೆ ರಚಿಸಿದ ಕಧೀಮರು : ಜನರೇ ಹುಷಾರ್..!

ಈ ಸಂದರ್ಭದಲ್ಲಿ ಕುಮಟಾ ಅರಣ್ಯ ಇಲಾಖೆಯ ಅಧಿಕಾರ ಗಳಾದ.ಎ.ಸಿ.ಎಪ್ ಪ್ರವೀಣ ಕುಮಾರ ಬಸ್ರೂರ್, ಆರ್.ಎಪ್.ಓ ಪ್ರವೀಣ ನಾಯಕ, ಕುಮಟಾ ಪುರಸಭಾ ಮುಖ್ಯಾಧಿಕಾರಿಗಳಾದ ಸುರೇಶ ಎಮ್.ಕೆ, ಬಿ.ಜೆ.ಪಿ ಯುವಮೋರ್ಚ ಅಧ್ಯಕ್ಷರಾದ ಜಗದೀಶ್ ಭಟ್, ಪುರಸಭಾ ಸದಸ್ಯರಾದ ಸಂತೋಷ ನಾಯ್ಕ, ಮೊಹಿನಿ ಗೌಡ,ವಿಶ್ವನಾಥ ನಾಯ್ಕ ಮುಂತಾದವರು ಉಪಸ್ಥಿತರಿದ್ದರು..

RELATED ARTICLES  ಮಕ್ಕಳ ನೈತಿಕ ಮೌಲ್ಯಾಧಾರಿತ ಜೀವನ ಶೈಲಿ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ : ರಾಜೇಂದ್ರ ಬೇಕಲ್