ಸಿದ್ದಾಪುರ: ತಾಲೂಕಿನ ಮಘೇಗಾರ ಮಹಾಗಣಪತಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಭುವನಗಿರಿ ಭುವನೇಶ್ವರಿ ತಾಳಮದ್ದಳೆ ಕೂಟದವರಿಂದ ಸತ್ಯ ಹರಿಶ್ಚಂದ್ರ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಮಾಧವ ಭಟ್ಟ ಕೊಳಗಿ, ಮದ್ದಳೆ ವಾದಕರಾಗಿ ಹನುಮಂತ ಗೌಡ ಕಶಿಗೆ ಸಹಕರಿಸಿದರು.

RELATED ARTICLES  ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೃದಯಾಘಾತದಿಂದ ವ್ಯಕ್ತಿ ಸಾವು

ಮುಮ್ಮೇಳದಲ್ಲಿ ಶ್ರೀಧರ ಭಟ್ಟ ಮುತ್ತಿಗೆ (ದೇವೇಂದ್ರ), ಜಿ.ಕೆ.ಭಟ್ಟ ಕಶಿಗೆ (ವಸಿಷ್ಠ), ಎಂ.ಕೆ.ನಾಯ್ಕ ಹೊಸಳ್ಳಿ (ವಿಶ್ವಾಮಿತ್ರ), ವಿ.ಶೇಷಗಿರಿ ಭಟ್ಟ ಗುಂಜಗೋಡ (ಹರಿಶ್ಚಂದ್ರ), ಕಿರಣ ಹೆಗಡೆ ಮಘೇಗಾರ (ಚಂದ್ರಮತಿ), ಜೈರಾಮ ಭಟ್ಟ ಗುಂಜಗೋಡ (ನಕ್ಷತ್ರಕ), ಎಂ.ಕೆ.ಹೆಗಡೆ ಹಳದೋಟ (ಲೋಹಿತಾಶ್ವ), ಜಗದೀಶ ಮಘೇಗಾರ (ಬ್ರಾಹ್ಮಣ) ಹಾಗೂ ಶ್ರೀಧರ ಹೆಗಡೆ ಹಳದೋಟ (ವೀರಬಾಹುಕ)ಪಾತ್ರ ನಿರ್ವಹಿಸಿದರು. ರವೀಂದ್ರ ಭಟ್ಟ ಬಳಗುಳಿ ಸ್ವಾಗತಿಸಿದರು.

RELATED ARTICLES  ಸಂಪನ್ನವಾಯ್ತು ರಜತ ಮಹೋತ್ಸವ: ಜನರನ್ನು ರಂಜಿಸಿತು ಕಾರ್ಯಕ್ರಮ.