ಕಾರವಾರ : ಕಳೆದ ನಾಲ್ಕು ದಿನದಿಂದ ನಿಶ್ಚಿಂತರಾಗಿದ್ದ ಉತ್ತರಕನ್ನಡದ ಜನರಿಗೆ ಇಂದು ಮತ್ತೆ ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದು ಮತ್ತೆ ಚಿಂತೆಗೆ ಕಾರಣವಾಗಿದೆ.

3 ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ 99ಕ್ಕೆ ಏರಿಕೆಯಾಗಿರುವ ಕೊರೋನಾ ಮತ್ತೆ ಭಯ ಮೂಡಿಸಿದೆ.

RELATED ARTICLES  ಉತ್ತರಕನ್ನಡದಲ್ಲಿ 978 ಮಂದಿಯಲ್ಲಿ ಕೊರೋನಾ ಪಾಸಿಟೀವ್ : 18 ಸಾವು

ಮಹಾರಾಷ್ಟ್ರದಿಂದ ವಾಪಸ್ಸಾದ ಮೂವರಲ್ಲಿ ಕೋವಿಡ್-19 ಪಾಸಿಟಿವ್ ದೃಡವಾಗಿದೆ.ಹಳಿಯಾಳ ಮೈಲದ 21 ವರ್ಷದ ಯುವತಿ, ದಾಂಡೇಲಿಯ 34 ವರ್ಷದ ವ್ಯಕ್ತಿ ಹಾಗೂ 24 ವರ್ಷದ ಯುವಕನಲ್ಲಿ ಸೋಂಕು ಕಾಣಿಸಿಕೊಂಡಿದೆ.

RELATED ARTICLES  ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಬಲಾತ್ಕಾರ..? ಉತ್ತರಕನ್ನಡಿಗರೇ ಬೆಚ್ಚಿ ಬೀಳುವಂತೆ ಪ್ರಕರಣವೊಂದು ದಾಖಲು.

ಸಿದ್ಧಾಪುರ ಮೂಲದ ಇಬ್ಬರು ಯುವತಿಯರು ಓರ್ವ ಮಹಿಳೆ ಗುಣಮುಖರಾಗಿ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ನಿಂದ ಇಂದು ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 85 ಮಂದಿ ಕೊರೊನಾ ಸೋಂಕಿನಿಂದ ಗುಣಮಖರಾಗಿದ್ದಾರೆ.