ಕುಮಟಾ: ಕೋವಿಡ್_19 ಸಮಯದಲ್ಲಿ ಮಕ್ಕಳು ರಜಾ ಅವಧಿಯನ್ನು ಸದುಪಯೋಗ ಪಡಿಸಿಕೊಳ್ಳಲು ವಿನೂತನ ಕಾರ್ಯಕ್ರಮವನ್ನು ಆಯೋಜಿಸಬೇಕೆನ್ನುವ ನಮ್ಮ ಕಲ್ಪನೆಗೆ ಬಣ್ಣ ತುಂಬಿದ್ದು “ವಿಡಿಯೋ ಮೂಲಕ ಹಾಡಿನ ಸ್ಪರ್ಧೆ” ನಮ್ಮ ಬಾಡ ನ್ಯೂಸ್ ತಂಡವು 4 ರಿಂದ 15 ವರ್ಷದ ಒಳಗಿನ ಮಕ್ಕಳಿಗಾಗಿ ಆಯೋಜಿಸಿದ ಹಾಡಿನ ಸ್ಪರ್ದೆಯಲ್ಲಿ ಒಟ್ಟೂ 65 ಮಕ್ಕಳುಭಾಗವಹಿಸುವ ಮೂಲಕ ಹಾಡಿದ ಎಲ್ಲಾ ಮಕ್ಕಳೂ ಜನ ಮೆಚ್ಚುಗೆ ಗಳಿಸಿದ್ದಾರೆ. ನಮಗೆ ಸಂದೇಶದ ಮೂಲಕ ನೂರಾರು ಹಾರೈಕೆಗಳು ಹರಿದು ಬಂದಿದೆ. ಇಲ್ಲಿ ಸೋಲು ಗೆಲುವಿನ ಪ್ರಶ್ನೆಯೇ ಇಲ್ಲ ಎಲ್ಲರೂ ಉತ್ತಮ ಹಾಡುಗಾರರು ಅವರಿಗೆ ಒಂದು ವೇದಿಕೆ ಕಲ್ಪಿಸಿ ಕೊಟ್ಟಿದ್ದೇವೆ ಇದೇ ಅವರ ಭವಿಷ್ಯ ರೂಪಿಸುವುದು ಮತ್ತು ಅವರಿಗೆ ಮುಂದಿನ ದಿನ ಹೆಚ್ಚಿನ ಅವಕಾಶ ಸಿಗಬಹುದು.ನಮ್ಮ ಪ್ರಯತ್ನಕ್ಕೆ ಫಲ ನೀಡಿದ್ದೀರಾ ನಮ್ಮ ಪ್ರಥಮ ಪ್ರಯತ್ನವು ಅಭೂತಪೂರ್ವ ಯಶಸ್ಸು ಕಾಣಲು ಕಾರಣಿಕರ್ತರಾಗಿದ್ದೀರಿ.
ಮೊದಲೇ ಹೇಳಿದಂತೆ ಕಾರ್ಯಕ್ರಮದ ನಿಯಮದ ಪ್ರಕಾರ ಉತ್ತಮ ಹಾಡುಗಾರರ ಆಯ್ಕೆ ಪ್ರಕ್ರೀಯೆ ನಿರ್ಣಾಯಕರ ನಿರ್ಣಯದ ಮೂಲಕ ಪೂರ್ಣ ಗೊಂಡಿದ್ದು ಆಯ್ಕೆ ಮಾಡಲಾಗಿದೆ ವಿವರ ಈ ಕೆಳಗಿನಂತಿದೆ.
#ಬಹುಮಾನ_ವಿಜೇತರು
ಪ್ರಥಮ ಬಹುಮಾನ-ಕುಮಾರಿ|| ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ (ಫಲಕ ಮತ್ತು ಪ್ರಸಸ್ತಿ ಪತ್ರ)
ದ್ವಿತೀಯ ಬಹುಮಾನ-ಕುಮಾರ|| ಅಭಿರಾಮ್ ಎಚ್ ವಾಯ್ ಧರ್ಮಸ್ಥಳ (ಫಲಕ ಮತ್ತು ಪ್ರಸಸ್ತಿ ಪತ್ರ)
ತೃತೀಯ ಬಹುಮಾನ-ಕುಮಾರಿ|| ಸಹನಾ ಹೆಗಡೆ , ಹೊನ್ನಾವರ (ಫಲಕ ಮತ್ತು ಪ್ರಸಸ್ತಿ ಪತ್ರ)
#ಸಮಾಧಾನಕರಬಹುಮಾನದಸ್ಪರ್ದಿಗಳು
ಕುಮಾರಿ||ಸಿಂಚನ ನಾಯ್ಕ, ಹೆಗಡೆ, ಕುಮಟಾ – (ಅಭಿನಂದನಾ ಪತ್ರ)
ಕುಮಾರಿ||ಪ್ರಸೀಧಾ ಪಿ ರಾವ್ , ಧರ್ಮಸ್ಥಳ- (ಅಭಿನಂದನಾ ಪತ್ರ)
ಕುಮಾರಿ|| ಶ್ರೇಷ್ಠ ಆಳ್ವ, ಪುತ್ತೂರು- (ಅಭಿನಂದನಾ ಪತ್ರ)
ಕುಮಾರಿ|| ಮಹಿಮಾ ನಾಯ್ಕ, ಶಿರಸಿ- (ಅಭಿನಂದನಾ ಪತ್ರ)
ಕುಮಾರಿ||ಭೂಮಿಕಾ ಎಂ, ಸಾಗರ- (ಅಭಿನಂದನಾ ಪತ್ರ)
ನಿಮ್ಮ ಸುಮಧುರ ಕಂಠದಿಂದ ನಿಮ್ಮದೇ ಆದ ರಾಗ ಶೈಲಿಯಲ್ಲಿ ಹಾಡಿದ ಹಾಡು ನಮ್ಮ ಮತ್ತು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಹಾಡುವ ಮತ್ತು ಹಾಡಿನ ಸ್ಪರ್ದೆಯಲ್ಲಿ ಭಾಗವಹಿಸುವ ನಿಮ್ಮ ಆಸಕ್ತಿಗೆ ಹಾಗೂ ಅಭಿರುಚಿಗೆ ನಾವು ತಲೆಬಾಗಿದ್ದೇವೆ.ಸುಶ್ರಾವ್ಯವಾಗಿ ಹಾಡುವ ಕಲೆಯನ್ನು ನಿಮ್ಮದಾಗಿಸಿಕೊಂಡಲ್ಲಿ ನಿಮಗೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ನಿಮ್ಮ ತಂದೆ ತಾಯಿಯರ ಗುರು ಹಿರಿಯರ ಮಾರ್ಗದರ್ಶನದಲ್ಲಿ ಈ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕೆನ್ನುವುದು ನಮ್ಮ ಅಭಿಲಾಷೆ. ನಮ್ಮ ಆಯೋಜನೆಯಲ್ಲಿ ನಡೆದ ಸ್ಪರ್ದೆಯಲ್ಲಿ ಭಾಗವಹಿಸಲು ನಿಮಗೆ ನೇರವಾದ ಹಾಗೂ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ.
ನಿಮ್ಮೆಲ್ಲರ ಭಾಗವಹಿಸುವಿಕೆ ಇನ್ನಷ್ಟು ಕಾರ್ಯಕ್ರಮವನ್ನು ಸಂಘಟೀಸ ಬೇಕೆಂಬ ನಮ್ಮ ಹಂಬಲಕ್ಕೆ ಸ್ಪೂರ್ತಿ ತಂದಿದೆ. ಹಾಡುವ ಹವ್ಯಾಸವನ್ನು ಇನ್ನಷ್ಟು ಉತ್ತಮ ಪಡಿಸಿಕೊಂಡು ಹೆತ್ತವರು ಹೆಮ್ಮೆ ಪಡುವ ರೀತಿಯಲ್ಲಿ ಬೆಳೆಯಬೇಕು ಎನ್ನುವುದು ನಮ್ಮ ಆಶಯ. ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ನಮ್ಮ ಚಿಕ್ಕ ಪ್ರಯತ್ನಕ್ಕೆ ಬೆಂಬಲಿಸಿದ ನಿಮ್ಮೆಲ್ಲರಿಗೂ ಈ ಮೂಲಕ ಅಭಿನಂದಿಸುತ್ತೇವೆ ಮತ್ತು ಈ ಬಾಲ ಪ್ರತಿಭೆಗೆ ಪ್ರೋತ್ಸಾಹಿಸಿದ ಎಲ್ಲಾ ವೀಕ್ಷಕರಿಗೂ, ನಮ್ಮ ಕಾರ್ಯಕ್ರಮಕ್ಕೆ ಸದಾ ಬೆನ್ನೆಲುಬಾಗಿ ನಿಂತಿರುವ ತಂಡದ ಹಿರಿಯ ಮತ್ತು ಕಿರಿಯ ಎಲ್ಲಾ ಸದಸ್ಯರಿಗೂ ಹಾಗೂ ಬಹುಮಾನ ವಿಜೇತರ ಆಯ್ಕೆ ಮಾಡಿದ ನಿರ್ಣಾಯಕರಿಗೆ ಹಾಗೂ ವಿಜೇತರ ಹೆಸರನ್ನು ಘೋಸಿಸಿದ ಶ್ರೀ ಚಿದಾನಂದ ಭಂಡಾರಿಯವರಿಗೆ ಹಾಗೂ ಎಲ್ಲಾ ಮಾದ್ಯಮ ಮಿತ್ರರಿಗೂ ಈ ಮೂಲಕ ಧನ್ಯವಾದಗಳು ನಿಮ್ಮ ಪ್ರೀತಿ ವಿಶ್ವಾಸ ನಮ್ಮಲ್ಲಿ ಸಾದಾ ಇರಲಿ ಎಂದು ಹಾರೈಸುತ್ತೇವೆ ಎಂದು ಬಾಡಾ ನ್ಯೂಸ್ ವ್ಯವದ್ಥಾಪಕರು ತಿಳಿಸಿದ್ದಾರೆ.