ಗೋಕರ್ಣ : ಇಲ್ಲಿಯ ಸಮುದ್ರದಲ್ಲಿ ಈಜುವ ವೇಳೆ ಮುಳುಗಿ ಪ್ರವಾಸಿಗನೋರ್ವ ಮೃತಪಟ್ಟ ಘಟನೆ ನಡೆದಿದೆ .

ಸಾವಿಗೀಡಾದ ವ್ಯಕ್ತಿ ಬೆಂಗಳೂರಿನಿಂದ ಪ್ರವಾಸಕ್ಕೆಂದು ಗೋಕರ್ಣಕ್ಕೆ ಬಂದು , ಕುಡ್ಲೆ ಬೀಚ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ 36 ವರ್ಷ ಪ್ರಾಯದ ರಿಷಬ್ ಸಿಂಗ್ ಎಂದು ಗುರುತಿಸಲಾಗಿದೆ.ಈತ ಬೆಳಿಗ್ಗೆ ಸಮುದ್ರಕ್ಕೆ ಈಜಲು ತೆರಳಿದ್ದಾಗ ಅಲೆಗಳ ರಬಸಕ್ಕೆ ಸಿಲುಕಿ, ಮೇಲೆ ಬರಲಾಗದೆ ಮುಳುಗಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

RELATED ARTICLES  ಲಾಠಿ ರುಚಿ ಮಧ್ಯೆಯೇ ಮಾನವೀಯ ಕಾರ್ಯ: ಉ.ಕ ಪೋಲೀಸರ ಬಗ್ಗೆ ಜನತೆ ಮೆಚ್ಚುಗೆ

ಲಾಕ್‌ಡೌನ್ ಸಡಿಲಿಕೆಯ ನಂತರ ಮತ್ತೆ ಪ್ರವಾಸಿಗರು ಬರುತ್ತಿದ್ದು ಮಳೆಗಾಲದಲ್ಲಿ ಸಮುದ್ರದ ಈಜಿನ ಬಗ್ಗೆ ಕಾಳಜಿವಹಿಸುವಂತೆ‌ ತಿಳಿಸಬೇಕೆಂದು ಸ್ಥಳೀಯರು ವಿನಂತಿಸಿದ್ದಾರೆ.