ಕುಮಟಾ: ಕುಮಟಾದಲ್ಲಿ ಹಲವುದಿನಗಳ ಬಿಡುವಿನ ಬಳಿಕ ಮತ್ತೆ ಕರೊನಾ ಪ್ರತ್ಯಕ್ಷವಾಗಿದ್ದು, 56 ವರ್ಷದ ಪುರುಷದಲ್ಲಿ ಸೋಂಕು ದೃಢಪಟ್ಟಿದೆ. ಈತ ಮಹಾರಾಷ್ಟ್ರದಿಂದ ಬಂದಿದ್ದು, ಕ್ವಾರಂಟೈನ್‍ನಲ್ಲಿದ್ದರು. ಮಹಾರಾಷ್ಟ್ರದಿಂದ ಬರುವಾಗಲು, ಯಾವುದೇ ಸಾರ್ವಜನಿಕ ಸಾರಿಗೆ ಬಳಸದೆ, ಕಾರಿನಲ್ಲಿ ಬಂದಿದ್ದು, ಕಟ್ಟಿನಿಟ್ಟಿನ ಕ್ವಾರಂಟೈನ್ ನಿಯಮ ಪಾಲಿಸಿದ್ದರು. ಹೊರರಾಜ್ಯದಿಂದ ಬಂದ ಹಿನ್ನಲೆಯಲ್ಲಿ ಇವರ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಿ, ಕಳುಹಿಸಿಕೊಡಲಾಗಿತ್ತು. ಇಂದು ಇವರ ವರದಿ ಪಾಸಿಟಿವ್ ಬಂದಿದೆ.

RELATED ARTICLES  ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ಜೀವ.

ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ 100 ರ ಸಂಖ್ಯೆಗೆ ಏರಿಕೆಯಾಗಿದೆ. ಮಹಾರಾಷ್ಟ್ರದಿಂದ ವಾಪಸ್ಸಾದ 56 ವರ್ಷದ ಕುಮಟಾ ಮೂಲದ ವ್ಯಕ್ತಿ ಸೋಂಕಿತ ಸಂಖ್ಯೆ 6250 ಆಗಿದೆ. ಆದರೇ ಇಂದಿನ ಬುಲಟಿನ್ ನಲ್ಲಿ ಸೊಂಕಿತರ ಸಂಖ್ಯೆಯೇ ತಪ್ಪಾಗಿ ಪ್ರಕಟವಾಗಿದೆ.

RELATED ARTICLES  ಅಪರೂಪದ ಸಾಧನೆ ಮಾಡಿದ ಕುಮಟಾದ ಪ್ರತಿಭೆ ನಜಿಫಾ..!