ಹೊನ್ನಾವರ: ತಾಲೂಕಿನ ಮಂಕಿ ಹಳೆಮಠ ರಸ್ತೆಯಲ್ಲಿರುವ ನಾವಯತ್ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಹಿಂಬಾಗದಲ್ಲಿ ಜಾನುವಾರುಗಳನ್ನು ಕದ್ದು ತಂದು ಕಟ್ಟಿಹಾಕಿ ಇಡಲಾಗಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಹೊನ್ನಾವರ ಹಾಗೂ ಮಂಕಿ ಠಾಣೆಯ ಪೊಲೀಸರು 11 ಜಾನುವಾರುಗಳನ್ನು ರಕ್ಷಿಸಿ ಮನೆಯ ಮಾಲಿಕ ಹಾಗೂ ಕಾವಲುಗಾರನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ .

RELATED ARTICLES  ಚುನಾವಣಾ ಕಣದತ್ತ ಭೀಮಣ್ಣ ನಾಯ್ಕ : ಅಭಿಮಾನಿ ಬಳಗದಿಂದ ಸಾಮಾಜಿಕ ಜಾಲತಾಣ ಕಾರ್ಯಾಗಾರ


ಗುರುವಾರ ತಡರಾತ್ರಿ ಹೊನ್ನಾವರ ಹಾಗೂ ಮಂಕಿ ಪೋಲಿಸರು ಜಂಟಿಯಾಗಿ ದಾಳಿ ನಡೆಸಿ ಗೋವುಗಳ ರಕ್ಷಣೆ ಮಾಡಿರುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ . ಭಟ್ಕಳ ವಿಭಾಗದ ಎ.ಎಸ್ಪಿ ನಿಖಿಲ್ ಬುಳ್ಳಾವರ್ ಮಾರ್ಗದರ್ಶನದಲ್ಲಿ ಹೊನ್ನಾವರ ಸಿ.ಪಿ.ಐ ವಸಂತ ಆಚಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಹೊನ್ನಾವರ ಠಾಣೆಯ ಕಿರಿಯ ಪಿ.ಎಸ್.ಐ ಅಶೋಕ ಲಮಾಣಿ , ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಬಿ ಕೊಣ್ಣೂರು ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ೧೧ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಇವುಗಳ ಮಾರುಕಟ್ಟೆ ಮೌಲ್ಯ ಸುಮಾರು ೪೬,೦೦೦ ರುಪಾಯಿ ಎಂದು ಅಂದಾಜಿಸಲಾಗಿದೆ .

RELATED ARTICLES  ಪ್ರವಾಸೋದ್ಯಮ ಇಲಾಖೆಯಿಂದ 2 ಕೋಟಿ ರೂ. ಕಾಮಗಾರಿಗೆ ಮಂಜೂರಿ

Source : Bvp News