ಕಾರವಾರ: ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು ಜಿಲ್ಲೆಯಲ್ಲಿ ಇಂದು‌ ಐದು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಇನ್ನೂ ನಾಲ್ವರಲ್ಲಿ ಕೊರೋನಾ ಸೋಂಕು ದೃಡವಾಗಿದ್ದು ನಾಳೆಯ ಬುಲೆಟಿನ್ ನಲ್ಲಿ ಪ್ತಕಟವಾಗಲಿದೆ ಎನ್ನಲಾಗಿದೆ.

ಸೋಂಕು ದೃಢಪಟ್ಟವರಲ್ಲಿ ಹಳಿಯಾಳ ಮೂಲದ 12 ವರ್ಷದ ಬಾಲಕ ಹಾಗೂ 45 ವರ್ಷದ ಪುರುಷ ತಮಿಳುನಾಡಿನಿಂದ ಬಂದವರಾಗಿದ್ದು, 9 ವರ್ಷದ ಬಾಲಕಿ ಥಾಣೆಯಿಂದ ಬಂದವಳಾಗಿದ್ದಾಳೆ. ಜೊಯಿಡಾದ 24 ವರ್ಷದ ಯುವತಿ ಥಾಣೆಯಿಂದ ಬಂದವಳಾಗಿದ್ದು, ಶಿರಸಿಯ 63 ವರ್ಷದ ಯುವತಿ ಮುಂಬೈನಿಂದ ಬಂದವರಾಗಿದ್ದಾರೆ. ಮಹಾರಾಷ್ಟ್ರದಿಂದ ವಾಪಸ್ಸಾದ ಕುಮಟಾದ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಓರ್ವ 33 ವರ್ಷದ ಪುರುಷನಾಗಿದ್ದಾನೆ. ಇನ್ನು ಕಾರವಾರದಲ್ಲಿ ಥಾಣೆಯಿಂದ ವಾಪಸ್ಸಾಗಿದ್ದ 39 ವರ್ಷದ ಪುರುಷ ಹಾಗೂ 35 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಇಂದು ಕೆಲವರ ವರದಿ ಬಂದಿದೆ.

RELATED ARTICLES  ಅಂಕೋಲಾ ಸಮೀಪ ಕಾರು ಪಲ್ಟಿ : ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ ಪತ್ನಿ ಸಾವು