ಕೋವಿಡ್-19 ನಿಂದ ದೇಶವೇ ಸ್ಥಬ್ದಗೊಂಡು ಮೂರು ತಿಂಗಳು ಕಳೆದಿದೆ, ಅನೇಕ , ಮದುವೆ, ಮುಂಜಿ ಹೀಗೆ ಅನೇಕ ಶುಭ ಕಾರ್ಯಕ್ರಮಗಳು ನಿಂತಿವೆ..
ಈಗ ಸರ್ಕಾರ ವು ಕೆಲವು ಷರತ್ತುಗಳೊಂದಿಗೆ ಕಾರ್ಯಕ್ರಮ ಮಾಡಬಹುದು ಎಂದು ತಿಳಿಸಿದರೂ ಕೂಡ ಐವತ್ತಕ್ಕಿಂತ ಹೆಚ್ಚು ಜನ ಬರುವಂತಿಲ್ಲ ಆದರೂ ಖರ್ಚು ಹೆಚ್ಚಾಗುತ್ತದೆ ಎಂದು ಸುಮ್ಮನೆ ಇದ್ದವರೂ ಇದ್ದಾರೆ ಇದನ್ನು ಮನಗಂಡ ಕುಮಟಾ ದ ಪ್ರಸಿದ್ದ ಹವ್ಯಕ ಸಬಾಭವನ ದ ಆಡಳಿತ ಮಂಡಳಿ ಮಹತ್ವದ ತೀರ್ಮಾನ ಕೈಗೊಂಡಿದೆ..
ಕೇವಲ 50 ಸಾವಿರ ನೀಡಿದರೆ ಸಾಕು! ಕಡಿಮೆ ಖರ್ಚಿನಲ್ಲಿ ಸುಂದರ ವೇದಿಕೆ ಅಲಂಕಾರ, ಬಟ್ಟೆ ಹೊದಿಕೆಯ ಖುರ್ಚಿ ವ್ಯವಸ್ಥೆ, ಬರುವಾಗ ದ್ವಾರದಲ್ಲಿ ಸೆನಿಟೈಸರ್ ಹಾಗೂ ಪ್ರತಿಯೊಬ್ಬರಿಗೂ ಮಾಸ್ಕ ವಿತರಣೆ ಹಾಗೂ ಮದುವೆ ದಿನ ಬೆಳಿಗ್ಗೆ ವರ ಹಾಗೂ ವಧು ಕಡೆಯವರು ಸಂಬಂಧಿಕರಿಗೆ ತಿಂಡಿ ಹಾಗೂ ಮಧ್ಯದಲ್ಲಿ ಅವರು ತಿಳಿಸಿದ ಪಾನೀಯ ವ್ಯವಸ್ಥೆ ಇರುತ್ತದೆ ನಂತರ ಮಧ್ಯಾಹ್ನ ಶುಚಿ ರುಚಿಯಾದ ಊಟದ ವ್ಯವಸ್ಥೆ ಊಟಕ್ಕೆ ಅವರು ತಿಳಿಸಿದ ಸಿಹಿ ಮಾಡಲಾಗುತ್ತದೆ ಊಟಕ್ಕೆ ತಮಗಿಷ್ಟದ ವಿವಿಧ ಸಿಹಿ ತಿನಿಸುಗಳು ಬೇಕಾದಲ್ಲಿ ಮೊದಲೇ ತಿಳಿಸಬೇಕಾಗುತ್ತದೆ ಅದರ ಬೆಲೆ ಎಕ್ಸ್ಟ್ರಾ ನೀಡಬೇಕಾಗುತ್ತದೆ ಅಷ್ಟೇ..ಇನ್ನು ಮದುವೆ ದಿನ ಮಾಡುವ ಹೋಮ ಹಾಗೂ ಪೂಜೆಯ ಸಾಮಗ್ರಿ ಗಳನ್ನು ಕಛೇರಿಯ ವತಿಯಿಂದಲೇ ಪೂರೈಸಲಾಗುತ್ತದೆ ಎಂದು ತಿಳಿಸಿದ್ದಾರೆ.. ಸರ್ಕಾರ ದ ಆದೇಶದಂತೆ ಕೇವಲ ಐವತ್ತು ಜನರಿಗೆ ಮಾತ್ರ ಮದುವೆಗೆ ಅವಕಾಶ.. ಸರ್ಕಾರ ದ ಆದೇಶವನ್ನು ಯಥಾವತ್ತಾಗಿ ಪಾಲಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಚ್ಛತೆ ಹಾಗೂ ಆರೋಗ್ಯ ದ ರಕ್ಷಣೆ ಕಡೆ ಹೆಚ್ಚಿನ ಒತ್ತು ನೀಡಲಾಗುವುದು ಪ್ರತಿ ಮದುವೆ ಯ ನಂತರ ಔಷಧಿ ಸಿಂಪಡಣೆ ಮಾಡಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

RELATED ARTICLES  ಭಗವದ್ಗೀತೆಯನ್ನು ಅವಹೇಳನ ಮಾಡಿದರಾ ಶಿಕ್ಷಕಿ? ಶಿರಸಿಯಲ್ಲಿ ಸುದ್ದಿಯಲ್ಲಿದೆ ಧರ್ಮ ನಿಂದನೆ ವಿಷಯ

ಮತ್ತೇಕೆ ತಡ! ಕೂಡಲೇ ಹವ್ಯಕ ಸಬಾಭವನ ವನ್ನು ಸಂಪರ್ಕಿಸಿ.. ಮದುವೆ ಮುಗಿಸಿ ಸಂತೋಷದಿಂದ ತೆರಳಿ…
ಹವ್ಯಕ ಸಬಾಭವನ ಮೂರೂರು ರಸ್ತೆ.. ಕುಮಟಾ