ಬೆಂಗಳೂರು :  ನೋ ಪಾರ್ಕಿಂಗ್‌  ಜಾಗದಲ್ಲಿ ವಾಹನ ನಿಲುಗಡೆ ಮಾಡಿದ್ದ ಪೊಲೀಸರ ಟೋಯಿಂಗ್ ವಾಹನಕ್ಕೆ (ಟೈಗರ್) ಸಂಚಾರಿ ಪೊಲೀಸರೇ ದಂಡ ವಿಧಿಸಿದ್ದಾರೆ.

ಹಲಸೂರು ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ತಮ್ಮದೇ ಠಾಣೆಗೆ ಸೇರಿದ ಟೋಯಿಂಗ್ ವಾಹನಕ್ಕೆ ದಂಡ ವಿಧಿಸುವ ಮೂಲಕ ಸಂಚಾರ ನಿಯಮ ಯಾರೇ ಉಲ್ಲಂಘಿಸಿದರೂ ದಂಡ ಖಚಿತ ಎಂದು ಸಾರಿದ್ದಾರೆ.

RELATED ARTICLES  ಕುಮಟಾ ದುಂಡಕುಳಿ ಸಮೀಪ ಸಾರಿಗೆ ಬಸ್ ಅಪಘಾತ

ಹಲಸೂರು ಸಂಚಾರ ಠಾಣೆ ಸಮೀಪ ವಾಹನ ನಿಲ್ಲಿಸಲು ಜಾಗವಿದ್ರು ಟೈಗರ್ ಚಾಲಕ ಖಾಸಗಿ ಶಾಲೆ ಎದುರಿನ ಪಾದಚಾರಿಗಳು ಒಡಾಡುವ ಜಾಗದಲ್ಲಿ ಟೋಯಿಂಗ್ ವಾಹನ ನಿಲ್ಲಿಸುತ್ತಿದ್ದ. ಸಾರ್ವಜನಿಕರು ಅದೆಷ್ಟು ಬಾರಿ ಹೇಳಿದ್ರು ಚಾಲಕ ಕ್ಯಾರೆ ಅಂದಿರಲಿಲ್ಲ. ಪೊಲೀಸರಿಗೆ ಕಾನೂನು ಹೇಳಿ ಕೊಡ್ತಾರೆ ಎಂದು ನಿರ್ಲಕ್ಷ್ಯ ತೋರಿದ್ದ. ಇದರಿಂದ ಬೇಸತ್ತ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಸಂಚಾರಿ ಪೊಲೀಸರು ಕೂಡಾ ಟೈಗರ್ ಚಾಲಕನಿಗೆ ಹೀಗೆಲ್ಲ ವಾಹನ ನಿಲ್ಲಿಸಬೇಡ ಎಂದು ಹೇಳಿದ್ದರು. ಆದ್ರೆ ಆತ ಕೇಳಿರಲಿಲ್ಲ. ಹೀಗಾಗಿ ವಿಧಿಯಿಲ್ಲದೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

RELATED ARTICLES  ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೆಟ್ಟ ಬಿಎಂಟಿಸಿ ಬಸ್ಸುಗಳ ದರ್ಶನ