ಕುಮಟಾ ತಾಲೂಕಿನ ಹೆಗಡೆಯ ವೇದ ಸಂಸ್ಕೃತ ಅಕಾಡೆಮಿ ಪ್ರಕಟಿಸುತ್ತಿರುವ. “ಸಂಶೋಧನಾ ಸಂಪುಟ” ದ 13 ನೇ ಆವೃತ್ತಿಯ ಲೋಕಾರ್ಪಣಾ ಕಾರ್ಯಕ್ರಮ ಹೆಗಡೆಯ ಶ್ರೀ ಮಹಾಗಣಪತಿ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಿತು. ಕುಮಟಾದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ್ಟರವರು ಸಂಶೋಧನಾ ಸಂಪುಟವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ” ಇದು ನನ್ನ ಭಾಗ್ಯವೆಂತಾ ಭಾವಿಸಿದ್ದೇನೆ. ಈವರೆಗಿನ 12 ಸಂಪುಟಗಳನ್ನು ವಿವಿಧ ಮಠಾಧೀಶರು ಲೋಕಾರ್ಪಣೆಗೊಳಿಸಿದ್ದು 13 ನೇ ಸಂಪುಟದ ಲೋಕಾರ್ಪಣೆಗೊಳಿಸುವ ಅವಕಾಶ ನನಗೆ ದೊರೆತಿದೆ. ಸಂಸ್ಕೃತದ ಉಳಿವಿಗಾಗಿ ಸೇವೆ ಸಲ್ಲಿಸುತ್ತಿರುವ ಡಾ.ಗೋಪಾಲಕೃಷ್ಣ ಹೆಗಡೆಯವರ ಕಾರ್ಯ ಶ್ಲಾಘನೀಯ. ಇಂತಹ ಒಂದು ಹಳ್ಳಿಯಲ್ಲಿ “ವೇದ ಸಂಸ್ಕೃತ ಅಕಾಡೆಮಿ” ಯಂತಹ ರಾಷ್ಟೀಯ ಮಟ್ಟದ ಸಂಸ್ಥೆಯನ್ನು ಕಟ್ಟಿಬೆಳೆಸುವುದು ಅದನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ ಅಂತಹ ಮಹತ್ಕಾರ್ಯ ಮಾಡಿದ ಸಂಸ್ಥೆಯ ಆಡಳಿತ ಮಂಡಳಿಯ ಸಾಧನೆ ಅಭಿನಂದನೆಗೆ ಅರ್ಹವಾದುದು ಎಂದರು. ವೇದ ಸಂಸ್ಕೃತ ಅಕಾಡೆಮಿ ಹಾಗೂ ವಿಪ್ರ ಒಕ್ಕೂಟ ಹೆಗಡೆಯ ವತಿಯಿಂದ ಶ್ರೀ ರಾಜೇಂದ್ರ ಭಟ್ಟರವರನ್ನು ಸನ್ಮಾನಿಸಲಾಯಿತು.

RELATED ARTICLES  ಸಂಪನ್ನವಾಯ್ತು ಏಳುದಿನದ ಸಾಂಸ್ಕೃತಿಕ ಸಂಭ್ರಮ: ಜಿ.ಎಲ್‌ಹೆಗಡೆಯವರಿಗೆ ಸಂದಿತು ಗೌರವ.

ವೇದ ಸಂಸ್ಕೃತ ಅಕಾಡೆಮಿಯ ಅಧ್ಯಕ್ಷರಾದ ವಿದ್ವಾನ್ ಸುಬ್ರಹ್ಮಣ್ಯ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ವಿಪ್ರ ಒಕ್ಕೂಟದ ಅಧ್ಯಕ್ಷ ಡಾ. ಉಮೇಶ ಶಾಸ್ತ್ರಿ ಉಪಸ್ಥಿತರಿದ್ದರು. ವೇದಮೂರ್ತಿ ಶ್ರೀ ಗಣಪತಿ ಭಟ್ಟ ಸಂಗಡಿಗರು ವೇದಘೋಷ ಮಾಡಿದರು. ವೇದ ಸಂಸ್ಕೃತ ಅಕಾಡೆಮಿಯ ನಿರ್ದೇಶಕ ಹಾಗೂ ಜರ್ನಲ್ ನ ಪ್ರಧಾನ ಸಂಪಾದಕರಾದ ಡಾ.ಗೋಪಾಲಕೃಷ್ಣ ಹೆಗಡೆ ಸ್ವಾಗತಿಸಿದರು. ಡಾ.ರವೀಂದ್ರ ಭಟ್ಟ ಸೂರಿ ವಂದಿಸಿದರು.

RELATED ARTICLES  ಬಸ್ ಚಾಲಕನ ಮೇಲೆ ಹಲ್ಲೆ.