ಭಟ್ಕಳ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೊದಲನೇ ಮಹಡಿಯ ಮನೆಯೊಂದರಲ್ಲಿ ಭಾನುವಾರ ಚಾರ್ಜ್‌ಗೆ ಇಡಲಾಗಿದ್ದ ಎರಡು ಬ್ಯಾಟರಿಗಳು ಸ್ಫೋಟಗೊಂಡಿವೆ. ಇದರಿಂದ ಬೆಂಕಿ ಹರಡಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

RELATED ARTICLES  ದಿ. ಎಲ್ ವಿ ಶಾನಭಾಗ ರವರಿಗೆ ಶೃದ್ಧಾಂಜಲಿ ಸಮರ್ಪಣೆ: ಭಾವುಕರಾಗಿ ತಮ್ಮ ನುಡಿನಮನ ಸಲ್ಲಿಸಿದ ಗಣ್ಯರು.

ನೂಹ್ ರುಕ್ನುದ್ದೀನ್ ಎಂಬುವವರ ಮನೆಯಲ್ಲಿ ಈ ಅವಘಡ ನಡೆದಿದೆ. ಅವರ ಪತ್ನಿ ಹಾಗೂ ಮಕ್ಕಳು ತಾಯಿ ಮನೆಗೆ ಹೋಗಿದ್ದರು. ನೂಹ್ ಅವರು ಮನೆಯಲ್ಲೇ ಮಲಗಿದ್ದರು. ಬೆಂಕಿ ತಗುಲಿದ್ದು ಕಂಡು ಮನೆಯಿಂದ ಹೊರಗೆ ಓಡಿ ಬಂದಿದ್ದರಿಂದ ಯಾವುದೇ ಅಪಾಯವಾಗಿಲ್ಲ.

RELATED ARTICLES  ಡಾ.ಬಿ.ಎ.ಸನದಿ ಬುಕ್ ಕಾರ್ನರ್ ಗೆ ಕೆ.ವಿ.ತಿರುಮಲೇಶ್ ಸಾಹಿತ್ಯ ಕೃತಿಗಳ ಕೊಡುಗೆ

ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಮನೆಯ ಗೋಡೆ, ಚಾವಣಿ, ಎ.ಸಿ, ಫ್ಯಾನ್, ಎಲೆಕ್ಟ್ರಾನಿಕ್ ಉಪಕರಣಗಳು, ಮೇಜು, ಕುರ್ಚಿಗಳು, ಅಲಂಕಾರಿಕಾ ವಸ್ತುಗಳಿಗೆ ಹಾನಿಯಾಗಿದೆ.