ಕುಮಟಾ: ತಾಲೂಕಿನ ಮೂಲತಃ ದೀವಗಿ ಗ್ರಾಮದ ನಿವಾಸಿ ಹಲವು ವರ್ಷಗಳಿಂದ ಕಾಗಾಲದಲ್ಲಿ ವಾಸ್ತವ್ಯ ಮಾಡುತ್ತಿದ್ದ ಸಮಾಜ ಸೇವಾ ಕಾರ್ಯಕರ್ತ ೬೩ ವರ್ಷದ ಉಮೇಶ ಎನ್ ಭಂಡಾರಿ ದಿ. ೧೪.೦೬.೨೦೨೦ ರಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.


ಇತ್ತೀಚೆಗೆ ಅವರು ವಾ.ಕ.ರ.ಸಾ ಸಂಸ್ಥೆಯ ಕುಮಟಾ ಘಟಕದಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಾ ನಿವೃತ್ತಿ ಹೊಂದಿದ ನಂತರ ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು.

RELATED ARTICLES  ರಸ್ತೆಗೇ ಇಳಿಯದ ಆಟೋ ರಿಕ್ಷಾ : ಜನರ ಪರದಾಟ

ಮೃತರು ಪತ್ನಿ, ಮಗಳು ಮತ್ತು ಮಗನನ್ನು ಹಾಗೂ ತುಂಬುಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದು ಭಗವಂತ ಎಲ್ಲರಿಗೂ ದುಃಖ ಸಹಿಸುವ ಶಕ್ತಿ ನೀಡಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಅಂತಿಮ ದರ್ಶನದಲ್ಲಿ ಪಾಲ್ಗೊಂಡಿದ್ದ ಹಿರಿಯರಾದ ವಿನೋದ ಪ್ರಭು, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ, ಹಿರಿಯ ಧುರೀಣರಾದ ಕುಮಾರ ಮಾರ್ಕಂಡೇಯ, ಎಮ್ ಜಿ ಭಟ್, ನವೀನ, ಆರ್ ಕೆ ಅಂಬಿಗ, ವಿನಾಯಕ ದೇಶಭಂಡಾರಿ, ರಾಘವೇಂದ್ರ ದೇಶಭಂಡಾರಿ ಇನ್ನಿತರರು ಪರಮಾತ್ಮನಲ್ಲಿ ಪ್ರಾರ್ಥಿಸಿದ್ದಾರೆ.

RELATED ARTICLES  ಮತ್ತೆ ಉತ್ತರ ಕನ್ನಡಕ್ಕೆ ಬರ್ತಾರಾ ರಾಹುಲ್ ಗಾಂಧಿ?