ಕುಮಟಾ: ಕಾರ್ಮಿಕರ ಕಿಟ್‌ನ್ನು ಅರ್ಹರಿಗೆ ನೀಡದೆ ಬಿಜೆಪಿ ಕಾರ್ಯಕರ್ತರಿಗೆ ವಿತರಣೆ ಮಾಡಲಾಗಿದೆ ಎಂಬ ಸುಳ್ಳು ಆರೋಪ ಮಾಡಿದ ಜೆಡಿಎಸ್ ಮುಖಂಡರ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ಕುಮಟಾ ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವ್ಕರ್ ಹೇಳಿದರು.
ಕುಮಟಾ ಬಿಜೆಪಿ ಕಾರ್ಯಾಲಯದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಟಾ ಜೆಡಿಎಸ್ ಮುಖಂಡರು ಪಕ್ಷದ ಅಧ್ಯಕ್ಷರಿಲ್ಲದೆ ಸುದ್ದಿಗೋಷ್ಠಿ ಮಾಡಿದ್ದಾರೆ. ನಾಯಕರಿಲ್ಲದಂತಹ ಪಕ್ಷದವರು ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲು ಪ್ರಾಮಾಣಿಕ ಕಾರ್ಯಕರ್ತರು ಮತ್ತು ಶಾಸಕರ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ನಮ್ಮ ಶಾಸಕರು ಬಡವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ. ಕುಮಟಾದಲ್ಲಿ ನೋಂದಾಯಿತ ಕಾರ್ಮಿಕರ ಸಂಖ್ಯೆ ೮ ಸಾವಿರ ಇದೆ. ಕಾರ್ಮಿಕ ಇಲಾಖೆಯಿಂದ ೪ ಸಾವಿರ ಕಿಟ್ ಬಂದಿತ್ತು. ಅದರಲ್ಲಿ ಒಂದು ಸಾವಿರ ಕಿಟ್ ಹೊನ್ನಾವರಕ್ಕೆ ನೀಡಲಾಗಿದೆ. ಇನುಳಿದ ಕಿಟ್‌ನ್ನು ಕಡುಬಡವರನ್ನು ಗುರುತಿಸಿ ನೀಡಲಾಗಿದೆ. ಯರ‍್ಯಾರಿಗೆ ನೀಡಿದ್ದೇವೆ ಎಂಬುವ ಸಂಪೂರ್ಣ ಮಾಹಿತಿ ನಮ್ಮ ಬಳಿ ಇದೆ. ಅಲ್ಲದೆ ಕ್ಷೇತ್ರದಲ್ಲಿ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗೂ ಕಿಟ್ ತಲುಪಿಸುವ ಕಾರ್ಯ ಮಾಡಿದ್ದೇವೆ. ಇದನ್ನು ಬಿಟ್ಟು ನಮ್ಮ ಶಾಸಕರು ಮತ್ತು ಅವರ ಕುಟುಂಬದವರು ಸೇರಿ ಸುಮಾರು ೨೦ ಲಕ್ಷ ರೂ ವೆಚ್ಧದಲ್ಲಿ ತರಕಾರಿ, ಆಹಾರ ಧ್ಯಾನ್ಯಗಳ ಕಿಟ್ ನೀಡಿದ್ದಾರೆ. ಅಲ್ಲದೆ ಆಟೋ ಚಾಲಕರಿಗೆ ತಲಾ ೧ ಸಾವಿರ ಧನ ಸಹಾಯ ಮಾಡಿದ್ದಾರೆ. ಇಷ್ಟೆಲ್ಲ ಸಹಾಯ ಮಾಡಿದ ನಮ್ಮ ಶಾಸಕರು ಮತ್ತು ನಮ್ಮ ಪ್ರಾಮಾಣಿಕ ಕಾರ್ಯಕರ್ತರ ಮೇಲೆ ಜೆಡಿಎಸ್ ಪ್ರಮುಖರು ಸುಳ್ಳು ಆರೋಪ ಮಾಡಿರುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ ಇಂಥ ಸಂದರ್ಭದಲ್ಲಿ ಈ ಮುಖಂಡರು ಬಡ ಜನರಿಗೆ ತಾವೆಷ್ಟು ಸಹಾಯ ಮಾಡಿದ್ದಾರೆಂದು ತಿಳಿಸಲಿ ಎಂದು ಸವಾಲೆಸೆದರು.
ಸುದ್ದಿಗೋಷ್ಠಿಯಲ್ಲಿ ಕುಮಟಾ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಾಯಕ ನಾಯ್ಕ ಬಗ್ಗೋಣ, ಕುಮಟಾ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಜಗದೀಶ ಭಟ್ಟ ದೀವಗಿ, ಹಿಂದುಳಿದ ಮೋರ್ಚಾದ ಅಧ್ಯಕ್ಷ ವಿಶ್ವನಾಥ ನಾಯ್ಕ, ಮಹಿಳಾ ಮೋರ್ಚಾ ಅಧ್ಯಕ್ಷೆ ಮೋಹಿನಿ ಗೌಡ, ಪರಿಶಿಷ್ಟ ಜಾತಿ ಮೋರ್ಚಾದ ಅಧ್ಯಕ್ಷ ಮಂಜುನಾಥ ಮುಕ್ರಿ, ರೈತ ಮೋರ್ಚಾ ಅಧ್ಯಕ್ಷ ಪರಮೇಶ್ವರ ನಾಯ್ಕ , ಪುರಸಭೆ ಸದಸ್ಯರಾದ ಸಂತೋಷ ನಾಯ್ಕ, ಸುಶೀಲಾ ನಾಯ್ಕ, ಶೈಲಾ ಗೌಡ, ಸೂರ್ಯಕಾಂತ ಗೌಡ, ಸುಮತಿ ಭಟ್, ಬಿಜೆಪಿ ಪ್ರಮುಖರಾದ ಗಣೇಶ ಅಂಬಿಗ, ಇತರರು ಉಪಸ್ಥಿತರಿದ್ದರು.

RELATED ARTICLES  ಹೆಂಡತಿಯಮೇಲೆ ಹಲ್ಲೆ ಮಾಡಿದ ಹೋಂ ಗಾರ್ಡ : ತಪ್ಪಿಸಲು ಬಂದವರಮೇಲೆಯೂ ಹಲ್ಲೆ