ಕುಮಟಾ : ಕ್ಷೇತ್ರದ ಮಾಜಿ ಶಾಸಕರು, ಅಭಿವೃದ್ಧಿ ಹರಿಕಾರರು, ದೀನದಲಿತರ ಹಿತೈಷಿಗಳು, ಉದಾರ ದಾನಿಗಳು ಆಗಿದ್ದ ದಿ.ಮೋಹನ ಕೆ.ಶೆಟ್ಟಿ ಯವರ 68 ನೇ ಜನ್ಮದಿನದ ಪ್ರಯುಕ್ತ ಕುಮಟಾದ ಜಾನಕಿರಾಮ ವೃದ್ಧಾಶ್ರಮ ಕ್ಕೆ ದಿನಸಿ ಸಾಮಗ್ರಿಗಳನ್ನು ಹಾಗೂ ದಿನಬಳಕೆಯ ವಸ್ತುಗಳನ್ನು ದಿ. ಮೋಹನ ಕೆ.ಟ್ರಸ್ಟ್ ವತಿಯಿಂದ ಟ್ರಸ್ಟ್ನ ಉಪಾಧ್ಯಕ್ಷರಾದ ಶ್ರೀ ರವಿಕುಮಾರ್ ಎಂ. ಶೆಟ್ಟಿಯವರು ವಿತರಿಸಿದರು. ಈ ಸಂದರ್ಭದಲ್ಲಿ ವಿ.ಎಲ್.ನಾಯ್ಕ, ವಿನು ಜಾರ್ಜ್, ರವಿ ಗೌಡ, ಮನೋಜ ನಾಯಕ , ನಿತ್ಯಾನಂದ ನಾಯ್ಕ್ , ಸಂದೀಪ ವೆಂಕಟೇಕರ್ ಹಾಜರಿದ್ದರು……
ರೋಗಿಗಳ ಹಾಗೂ ವಯೋವೃದ್ಧರ ಬಗ್ಗೆ ಅತೀ ಕಾಳಜಿ ಹೊಂದಿರುವ ಶ್ರೀಮತಿ ಆಶಾ ವಿ.ನಾಯ್ಕ ಇವರು ಕುಮಟಾದಲ್ಲಿ ಜಾನಕಿರಾಮ ವೃದ್ಧಾಶ್ರಮ ನಡೆಸುತ್ತಿದ್ದು, ಇಲ್ಲಿ ಹಾಸಿಗೆ ಹಿಡಿದ ಅತೀ ಅವಲಂಬಿತ ರೋಗಿಗಳಿಗೆ ಹಾಗೂ ವಯೋವೃದ್ಧರಿಗೆ ಪ್ರೀತಿಯಿಂದ ಆರೈಕೆ ಮಾಡಲಾಗುತ್ತಿದೆ..
ಮೋಹನ್ ಕೆ. ಶೆಟ್ಟಿಯವರ ನಿಧನದ ನಂತರ ಅವರ ಸೇವಾಭಾವನೆಯನ್ನು ಮುಂದುವರೆಸುವ ಉದ್ದೇಶದಿಂದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು, ರವಿಕುಮಾರ್ ಎಂ. ಶೆಟ್ಟಿಯವರು ಹಾಗೂ ದಿಲೀಪ್ ಎಂ.ಶೆಟ್ಟಿಯವರು ದಿ.ಮೋಹನ್ ಕೆ. ಶೆಟ್ಟಿ ಟ್ರಸ್ಟ್ ಎಂಬ ಟ್ರಸ್ಟ್ ರಚನೆ ಮಾಡಿ, ಅಲ್ಲಿಂದ ಇಲ್ಲಿಯವರೆಗೂ ದೀನದಲಿತರ, ಬಡವರ, ವಿದ್ಯಾರ್ಥಿಗಳ, ರೋಗಿಗಳ, ಕಷ್ಟ ಎಂದು ಬಂದವರ ಸೇವೆಯಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಕೊರೋನಾ ವಾರಿಯರ್ಸ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರಿಗೆ, ಪೌರಕಾರ್ಮಿಕರಿಗೆ, ಕೊರೋನಾದಿಂದ ತೊಂದರೆಗೊಳಗಾದ ಟೆಂಪೋ ಚಾಲಕ-ಮಾಲಕ-ನಿರ್ವಾಹಕರು, ಟ್ಯಾಕ್ಸಿ ಚಾಲಕ ಮಾಲಕರಿಗೆ, ಪೇಪರ್ ಹಂಚುವವರಿಗೆ ಹಾಗೂ ಇನ್ನೂ ಅನೇಕರಿಗೆ ಟ್ರಸ್ಟ್ ಮೂಲಕ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು….