ಕಾರವಾರ: ಕೊರೋನಾ ಪ್ರಕರಣವಿಲ್ಲದ ತಾಲೂಕೆಂದು ಗುರುತಿಸಿಕೊಂಡಿದ್ದ ಅಂಕೋಲಾ ತಾಲೂಕಿಗೂ ಇಂದು ಕಹಿಯಾದ ದಿನವಾಗಿ ಪರಿಣಮಿಸಿದೆ.

ಅಂಕೋಲಿಗರಿಗೂ ಇಂದು ಶಾಕಿಂಗ್ ಸುದ್ದಿ ಕಾದಿದೆ. ಅಂಕೋಲಾದಲ್ಲೂ ಇಂದು ಒಂದು ಸೋಂಕಿತರ ಪ್ರಕರಣ ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.

ಎರಡು ದಿನಗಳ ಹಿಂದೆ ಅಂಕೋಲಾದ ಗ್ರಾಮೀಣ ಭಾಗದಲ್ಲಿನ ಮನೆಯೊಂದರಿಂದ ಇಬ್ಬರ ಗಂಟಲು ದ್ರವವನ್ನು ಪಡೆಯಲಾಗಿತ್ತು. ಇವರು ಕುಮಟಾದಲ್ಲಿ ಸೋಂಕಿತರಾದ ವ್ಯಕ್ತಿಯ ಮಗಳು ಹಾಗೂ ಅಳಿಯ ಎನ್ನಲಾಗಿದೆ.

RELATED ARTICLES  ಇಂದಿನ ಪ್ರಮುಖ ತಾಲೂಕಿನ ಮಾರುಕಟ್ಟೆ ಧಾರಣೆ

ಇನ್ನು, ಕಾರವಾರದಲ್ಲಿ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಕಳೆದ 2-3 ದಿನಗಳ ಹಿಂದೆ ಭಾವಿಕೇರಿಯ ವ್ಯಕ್ತಿಗಳಿಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದಾಗಿನಿಂದ ತಾಲೂಕಿನ ಜನತೆಯ ಎದೆ ಡವ-ಡವ ಎನ್ನುತ್ತಲೇ ಇತ್ತು. ಆತಂಕಿತರಾದ ಜನರು ಪರಿಚಯಿಸ್ಥರ ಬಳಿ ಕೊರೊನಾ ಬಂದಿದೆ ಅಂತೆ ಎಂದು ಬಿಸಿಬಿಸಿ ಚರ್ಚೆಯಲ್ಲಿ ತೊಡಗಿಕೊಂಡಿದ್ದರು. ವಾಟ್ಸಪ್ ಮತ್ತಿತ್ತರ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಶಂಕೆ ವ್ಯಕ್ತಪಡಿಸಿ ಮೆಸೇಜುಗಳ ವೈರಲ್ ಆಗಿದ್ದವು.

RELATED ARTICLES  ಪಕ್ಷದ ಸಂಘಟನೆ ಹಾಗೂ ಸೇವೆಗೆ ನಾವೆಲ್ಲ ಒಂದು ಎಂದರು ಬಿಜೆಪಿಗರು!