ಕುಮಟಾ : ಲಡಾಖ್ ನ ಗಲ್ವಾನದಲ್ಲಿ ಚೀನಾ ದೊಂದಿಗೆ ನಡೆದ ಘರ್ಷಣೆಯಲ್ಲಿ ನಮ್ಮ 20 ಯೋಧರು ವೀರಮರಣ ಹೊಂದಿದ್ದಾರೆ, ಇನ್ನೆಷ್ಟೋ ಜನ ಗಾಯಗೊಂಡಿದ್ದಾರೆ. ಇದು ತುಂಬ ದುಃಖದಾಯಕ ವಿಷಯವಾಗಿದೆ. ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಅವರ ವೀರತ್ವ ಗುಣವನ್ನು ಎಷ್ಟು ಹೊಗಳಿದರೂ ಕಡಿಮೆಯೇ. ವೀರಮರಣ ಹೊಂದಿದ ಮಹಾನ್ ಚೇತನಗಳಿಗೆ ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಇಂದು ಒಂದು ನಿಮಿಷದ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.


ಅದೇ ರೀತಿ ಎಐಸಿಸಿ ಮಾಜಿ ಅಧ್ಯಕ್ಷರಾದ ಮಾನ್ಯ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಕುಮಟಾದಾದ್ಯಂತ ಮನೆಮನೆಗೆ ದಿನಪತ್ರಿಕೆ ಹಂಚುವವರಿಗೆ ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ದಿನಸಿಕಿಟ್ ಗಳನ್ನು ಹಾಗೂ ಬ್ಯಾಗ್ ಗಳನ್ನು ವಿತರಿಸಲಾಯಿತು….

RELATED ARTICLES  ಎರಡನೇ ದಿನದ ರಾಜ್ಯೋತ್ಸವ ಕಾರ್ಯಕ್ರಮ ಯಶಸ್ವಿ : ಹೊನ್ನಾವರದಲ್ಲಿ ಮೊಳಗಿತು ನಿನಾದ “ ಭಾವ ಗಾನ ಯಾನ”


ಈ ಸಂದರ್ಭದಲ್ಲಿ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಮಾತನಾಡಿ ” ಲಡಾಕ್ ನ ಗಲ್ವಾನದಲ್ಲಿ ಚೀನಾದೊಂದಿಗೆ ಘರ್ಷಣೆಯಲ್ಲಿ ನಮ್ಮ 20 ಸೈನಿಕರು ವೀರಮರಣ ಹೊಂದಿದ್ದಾರೆ. ಚೀನಾದ ಈ ಕೃತ್ಯವನ್ನು ನಮ್ಮ ಪಕ್ಷ ಹಾಗೂ ನಾನು ವಯಕ್ತಿಕವಾಗಿ ಖಂಡಿಸುತ್ತೇನೆ. ನಮ್ಮ ಸೈನಿಕರ ಕುಟುಂಬಗಳಿಗೆ ಈ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತನು ನೀಡಲಿ. ಅದೇ ರೀತಿ ಇಂದು ನಮ್ಮ ಎಐಸಿಸಿ ಮಾಜಿ ಅಧ್ಯಕ್ಷರಾದ ಮಾನ್ಯ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯ ಪ್ರಯುಕ್ತ, ಮಾನ್ಯ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿ.ಕೆ‌.ಶಿವಕುಮಾರ್ ಅವರ ಸೂಚನೆಯ ಮೇರೆಗೆ ಕುಮಟಾದ್ಯಂತ ಮನೆಮನೆಗೆ ದಿನಪತ್ರಿಕೆ ಹಂಚುವವರಿಗೆ ದಿನಸಿಕಿಟ್ ಗಳನ್ನು ಹಾಗೂ ಹಂಚುತ್ತಿದ್ದೇವೆ. ನಮ್ಮ ಪಕ್ಷ ಬಡವರ, ದೀನದಲಿತರ, ಹಿಂದುಳಿದವರ ಪಕ್ಷವಾಗಿದ್ದು, ಜನರ ಸೇವೆಯೇ ನಮ್ಮ ಮುಖ್ಯ ಕಾರ್ಯವಾಗಿದೆ” ಎಂದರು.

RELATED ARTICLES  ಧಾರೇಶ್ವರ ದಿನಕರ ಪ್ರೌಢಶಾಲೆಯಲ್ಲಿ ಯೋಗ ದಿನಾಚರಣೆ


ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್. ನಾಯ್ಕ, ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ಪಕ್ಷದ ಮುಖಂಡರುಗಳು, ಬ್ಲಾಕ್ ಪದಾಧಿಕಾರಿಗಳು, ಪುರಸಭಾ ಮಾಜಿ-ಹಾಲಿ ಸದಸ್ಯರು, ಪಂಚಾಯತ್ ಹಾಲಿ-ಮಾಜಿ ಅಧ್ಯಕ್ಷರು/ಸದಸ್ಯರುಗಳು, ವಿವಿಧ ಸೆಲ್ ಗಳ ಅಧ್ಯಕ್ಷರು, ಸದಸ್ಯರು ಮುಂತಾದವರು ಹಾಜರಿದ್ದರು…