ಕಾರವಾರ : ಸರ್ಕಾರಿ ಆಸ್ತಿ ಹಾಳುಗೆಡವಿದ ಆರೋಪದ ಮೇರೆಗೆ ಕುಮಾರ ನಾಯ್ಕ ಎಂಬುವವರಿಗೆ ₨ 4 ಸಾವಿರ ದಂಡ ಹಾಗೂ 8 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಆದೇಶ ಹೊರಡಿಸಿದೆ.

2016ರ ಡಿಸೆಂಬರ್ 25ರಂದು ಜಿಲ್ಲಾಧಿಕಾರಿ ಕಚೇರಿಯ ಪುರುಷರ ಶೌಚಾಲಯದಲ್ಲಿ ಕುಮಾರ ನಾಯ್ಕ ಬಾಗಿಲು ಹಾಕಿಕೊಂಡು, ತಾನು ಸಾಯುವುದಾಗಿ ಕೂಗಿಕೊಂಡಿದ್ದ. ಅಲ್ಲಿನ ಕಿಟಕಿಯ ಗಾಜು ಒಡೆದು, ಅದರ ಚೂರಿನಿಂದ ಕುತ್ತಿಗೆ ಕೊಯ್ದುಕೊಳ್ಳಲು ಪ್ರಯತ್ನಿಸಿದ್ದ. ಬಳಿಕ ಪೊಲೀಸರು ಹಾಗೂ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಬಾಗಿಲು ಒಡೆದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಪಿಎಸ್‌ಐ ಸುರೇಶ ನಾಯ್ಕ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಶಿವಕುಮಾರ ಬಿ. ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ವಕೀಲ ಮಹಾದೇವ ಗಡದ ವಾದ ಮಂಡಿಸಿದ್ದರು.

RELATED ARTICLES  ಬಳ್ಕೂರಿನಲ್ಲಿ ನಡೆಯಿತು ನರೇಗಾ ಹಾಗೂ ಪಿಂಚಣಿ ಸಾಮಾಜಿಕ ಪರಿಶೋಧನೆ ಗ್ರಾಮಸಭೆ