ಕಾರವಾರ : ನಗರದ ಕಡಲಸಿರಿ ಯುವ ಸಂಘವು ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಸಾಮಾಜಿಕ ಜಾಲತಾಣದ ಮೂಲಕ ಯೋಗ ಸ್ಪರ್ಧೆಯನ್ನು ಏರ್ಪಡಿಸಿದೆ. ಆಸಕ್ತಿ ಇರುವ ಸ್ಪರ್ಧಿಗಳು ತಮ್ಮ ಯೋಗಾಸನದ ಒಂದು ಫೋಟೋಗಳನ್ನು ಈ 9343346829 ಮತ್ತು 8861928158 ನಂಬರ್ ಗಳಿಗೆ ವಾಟ್ಸಾಪ್ ಮಾಡುವ ಮೂಲಕ ಕಳುಹಿಸಿಕೊಡಬಹುದು. ನಂತರ ಆ ಫೋಟೋಗಳನ್ನು ಕಡಲ ಸರಿಯುವ ಸಂಘದ ಫೇಸ್ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಲಾಗುವುದು. ಎಲ್ಲಾ ವಯಸ್ಸಿನ ಸ್ಪರ್ಧಾಳುಗಳು ಭಾಗವಹಿಸಲು ಅವಕಾಶ ಇರುತ್ತದೆ ಮತ್ತು ಯಾವ ಪೋಸ್ಟು ಹೆಚ್ಚು ಲೈಕ್ ಪಡೆದಿರುತ್ತದೆ ಅವುಗಳನ್ನ ವಿಜೇತರೆಂದು ಘೋಷಿಸಲಾಗುವುದು. ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು ,ವಿಜೇತರ ಪಟ್ಟಿಯನ್ನು ದಿನಾಂಕ 01/07/2020 ರಂದು ತಿಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಈ ಮೇಲಿನ ನಂಬರಿಗೆ ಸಂಪರ್ಕಿಸಿ.

RELATED ARTICLES  ರಾಜ್ಯದ ಹಲವೆಡೆ ಮಳೆ ಮುಂದುವರಿಕೆ.