ಕುಮಟಾ : ಜೂನ್ 13 ರಂದು ಮುಂಬೈ ಇಂದ ಕುಮಟಾಕ್ಕೆ ಆಗಮಿಸಿ, ಕುಮಟಾದಲ್ಲಿಯೇ ಸರಕಾರಿ ಕ್ವಾರಂಟೈನ್ ಗೆ ಒಳಗಾಗಿದ್ದ ಯುವತಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರ ಜೊತೆಗೆ ದುಬೈನಿಂದ ಬಂದ ಓರ್ವ ಮಹಿಳೆ ಮತ್ತು ಮಹಾರಾಷ್ಟ್ರದಿಂದ ಬಂದ ಇಬ್ಬರು ವ್ಯಕ್ತಿ ಸೇರಿ ಒಟ್ಟು ಉತ್ತರ ಕನ್ನಡದ ನಾಲ್ಕು ಜನರಿಗೆ ಇಂದು ಕೊರೊನಾ ದೃಢಪಟ್ಟಿದೆ.

ಮುಂಬೈಯಿಂದ ಕುಮಟಾಕ್ಕೆ ವಾಪಾಸ್ಸಾಗಿ ಕ್ವಾರಂಟೈನ್‌ನಲ್ಲಿದ್ದ ಹೊಳೆಗದ್ದೆಯ 25 ವರ್ಷದ ಯುವತಿಯೋರ್ವಳಿಗೆ ಕರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಮುಂಬೈನಿಂದ ಕುಮಟಾಕ್ಕೆ ಬಂದ ಇವರು ನೇರವಾಗಿ ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಕುಟುಂಬದವರೊಂದಿಗೆ ಅಥವಾ ಯಾವುದೇ ಸಾರ್ವಜನಿಕರ ಸಂಪರ್ಕಕ್ಕೆ ಬಂದಿಲ್ಲವಾಗಿದೆ. ಹೊರ ರಾಜ್ಯದಿಂದ ಬಂದಿರುವ ಹಿನ್ನೆಲೆಯಲ್ಲಿ ಇವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಸರಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು.

RELATED ARTICLES  Pin Up casino: Официальный сайт ПинАп казино играть онлай

ಜೂನ್ 13 ರಂದು ವಿಶೇಷ ವಿಮಾನ ಮೂಲಕ ದುಬೈನಿಂದ ಬಂದ ಮಹಿಳೆ ಮತ್ತು ಮಹಾರಾಷ್ಟ್ರ ದಿಂದ ಬಂದ ಆಜಾದ್ ನಗರ ಯುವಕ ಹಾಗೂ ಶಿರಾಲಿ ತಟ್ಟಿಹಕ್ಕಲ್ ನಿವಾಸಿಯಾದ ವರ್ಷದ ಪುರುಷನಲ್ಲಿ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಇಬ್ಬರು ಸರ್ಕಾರಿ ಕ್ವಾರಂಟೈನಲ್ಲಿದ್ದಾರೆ. ಆದರೆ ಶಿರಾಲಿ ತಟ್ಟಿಹಕ್ಕಲು ನಿವಾಸಿ ಮುರುಡೇಶ್ವರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸರ್ಕಾರಿ ಕ್ವಾರಂಟೈನ ಮುಗಿಸಿ ಜೂನ್ 15 ರಂದು ಮನೆಗೆ ತೆರಳಿದವನಲ್ಲಿ ಸೋಂಕು ಪತ್ತೆಯಾಗಿರುವುದು ಕಂಡು ಬಂದಿದೆ. ಇದು ಭಯ ಹುಟ್ಟಿಸಿದೆ.

RELATED ARTICLES  ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಜಾಗತಿಕ ಯೋಗ ದಿನಾಚರಣೆ.