ಕಾರವಾರ :ಕಾರವಾರ ಮೂಲದ 24 ವರ್ಷದ ಮಹಿಳೆ, ಹಳಿಯಾಳ ಮೂಲದ 14 ವರ್ಷದ ಬಾಲಕ, ದಾಂಡೇಲಿ ಮೂಲದ 24 ಹಾಗೂ 34 ವರ್ಷದ ಯುವಕರು, ಹಳಿಯಾಳ ಮೂಲದ 25 ವರ್ಷದ ಮಹಿಳೆ ಮತ್ತು ಕುಮಟಾ ಮೂಲದ 54 ವರ್ಷದ ವ್ಯಕ್ತಿಯಲ್ಲಿ ಕೊರೋನಾ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಇಂದು ಆಸ್ಪತ್ರೆಯಿಂದ ಡಿಶ್ಚಾರ್ಜ ಮಾಡಲಾಗಿದೆ.
ವೈದ್ಯಕೀಯ ಕಾಲೇಜಿನ ಕೋವಿಡ್ 19 ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ನೂರರ ಗಡಿ ದಾಟಿದೆ.