ಕಾರವಾರ:ಹೊರ ರಾಜ್ಯಗಳಿಂದ ಬಂದವರಿಗೆ ಸರ್ಕಾರದ ಮಾರ್ಗಸೂಚಿಯಂತೆ ನಿಗದಿತ ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಸಾಂಸ್ಥಿಕ ಕ್ವಾರಂಟೈನ್ ಮುಗಿದ ಬಳಿಕ ಹೋಮ್ ಕ್ವಾರಂಟೈನ್ ವಿಧಿಸಲಾಗುತ್ತಿದೆ. ಆದರೆ ಕ್ವಾರಂಟೈನ್ ಪೂರ್ಣಗೊಳಿಸಿ ಹೋಮ್ ಕ್ವಾರಂಟೈನ್ ವಿಧಿಸಿದ ಬಳಿಕ ಪಾಸಿಟಿವ್ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜೊತೆಗೆ, ಓರ್ವ ಸೋಂಕಿತನಿಂದಾಗಿ ಮನೆ ಮಂದಿಯೆಲ್ಲಾ ಸೋಂಕಿತರಾಗುವಂತಾಗುತ್ತಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಇನ್ನು ಮುಂದೆ ‘ಕ್ವಾರಂಟೈನ್ ನಲ್ಲಿದ್ದವರ ಎರಡನೇ ಬಾರಿಯ ಗಂಟಲು ದ್ರವದ ವರದಿ ಬರುವವರೆಗೂ ಅವರನ್ನು ಮನೆಗೆ ಕಳುಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಹೋಮ್ ಕ್ವಾರಂಟೈನ್ ಗೆ ತೆರಳಿದ ಕೆಲವರು ತಮ್ಮದು ನೆಗೆಟಿವ್ ಬಂದಿದೆ ಎಂದು ಕ್ವಾರಂಟೈನ್ ನಿಯಮ ಪಾಲನೆ ಮಾಡದೆ ಅಸಡ್ಡೆ ತೋರುತ್ತಿದ್ದ ಬಗ್ಗೆ ಜನತೆಭಯ ಗೊಂಡಿದ್ದರು. ಜಿಲ್ಲಾಧಿಕಾರಿಗಳ ಈ ನಡೆ ಜನತೆಗೆ ಸಂತಸ ತಂದಿದೆ.