ಕಾರವಾರ : ಉ.ಕ ದಲ್ಲಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ ಆಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇಂದು ಶಿರಸಿ ಮೂಲದ 63 ವರ್ಷದ ಮಹಿಳೆ, 62 ವರ್ಷದ ಪುರುಷ, ಜೊಯಿಡಾದ 24 ವರ್ಷದ ಯುವಕ, ದಾಂಡೇಲಿಯ 9 ವರ್ಷದ ಬಾಲಕಿ, ಹಳಿಯಾಳದ 12 ವರ್ಷದ ಬಾಲಕ ಹಾಗೂ 45 ವರ್ಷದ ಪುರುಷ ಕೋವಿಡ್- 19 ಸೋಂಕಿನಿಂದ ಗುಣಮುಖರಾಗಿದ್ದಾರೆ.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ಗುಣಮುಖವಾಗುವ ಮೂಲಕ ಭಾನುವಾರ ಬಿಡುಗಡೆಯಾದರು.ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ.