ಕಾರವಾರ : ದೆಹಲಿಯಿಂದ ಹಿಂತಿರುಗಿದ 17 ವರ್ಷದ ಪುರುಷ , 43 ವರ್ಷದ ಮಹಿಳೆ , ಮಹರಾಷ್ಟ್ರ ದಿಂದ ಹಿಂತಿರುಗಿದ 69 ವರ್ಷದ ಮಹಿಳೆ , 14 ವರ್ಷದ ಬಾಲಕ, 42 ವರ್ಷದ ಮಹಿಳೆ , 19 ವರ್ಷದ ಯುವತಿ, 45 ವರ್ಷದ ಪುರುಷ , ಉತ್ತರ ಪ್ರದೇಶದಿಂದ ಹಿಂತಿರುಗಿದ 50 ವರ್ಷದ ಪುರುಷ ಹೀಗೆ ಎಂಟು ಜನರಿಗೆ ಉತ್ತರ ಕನ್ನಡದಲ್ಲಿ ಸೊಂಕು ಇಂದು ದೃಡಪಟ್ಟಿರುವುದು ವರದಿಯಾಗಿದೆ.
ನಾಲ್ಕು ಪುರುಷರು ಮತ್ತು ನಾಲ್ಕು ಮಹಿಳೆಯರಿಗೆ ಫಾಸಿಟಿವ್ ದೃಡಪಟ್ಟಿದ್ದು ಇದರಲ್ಲಿ ಮಹಾರಾಷ್ಟ್ರ ದಿಂದ ಭಟ್ಕಳಕ್ಕೆ ಆಗಮಿಸಿದ 5 ಜನರು ಉತ್ತರ ಪ್ರದೇಶದಿಂದ ಭಟ್ಕಳಕ್ಕೆ ಆಗಮಿಸಿದ ಒಂದು ,ದೆಹಲಿಯಿಂದ ಶಿರಸಿಗೆ ವಾಪಾಸಾಗಿದ್ದ ಇಬ್ಬರಲ್ಲಿ ಫಾಸಿಟಿವ್ ದೃಡಪಟ್ಟಿದೆ.