ಕಾರವಾರ : ಯಲ್ಲಾಪುರದ 25 ವರ್ಷದ ಬಸ್ ಕಂಡಕ್ಟರ್, ಮಹಾರಾಷ್ಟ್ರದಿಂದ ವಾಪಸ್ ಆಗಿದ್ದ 13 ವರ್ಷದ ಬಾಲಕ, ಮಹಾರಾಷ್ಟ್ರದಿಂದ ಹಿಂದುರುಗಿದ್ದ ಸಿದ್ದಾಪುರ ಮೂಲದ 50 ವರ್ಷದ ವ್ಯಕ್ತಿಗೆ, 19 ವರ್ಷದ ಜೊಯಿಡಾ ಮೂಲದ ಯುವತಿ, 75 ವರ್ಷದ ಭಟ್ಕಳ ಮೂಲದ ವೃದ್ಧ, 60 ವರ್ಷದ ಹೊನ್ನಾವರ ಮೂಲದ ಮಹಿಳೆ ಸೇರಿ ಇಂದು ಉತ್ತರ ಕನ್ನಡದಲ್ಲಿ ಆರು ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯ ಆರು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ರಾಜ್ಯ ಹೆಲ್ತ್ ಬುಲೆಟಿನ್ ನಲ್ಲಿ ಖಚಿತಪಡಿಸಲಾಗಿದೆ. ಈವರೆಗೆ ಜಿಲ್ಲೆಯ 144 ಜನರಿಗೆ ಸೋಂಕು ದೃಢಪಟ್ಟಿದ್ದು, 106 ಜನ ಗುಣಮುಖರಾಗಿದ್ದಾರೆ.
ಬೆಚ್ಚಿಸಿದ ಕೆಲವು ಪ್ರಕರಣಗಳು
ಮುಂಬೈನಿಂದ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್ ಮುಗಿಸಿ ಹೋಮ್ ಕ್ವಾರಂಟೈನ್ ಗೆ ಶಿಫ್ಟ್ ಆಗಿದ್ದ ಹೊನ್ನಾವರ ತಾಲೂಕಿನ ಮಹಿಳೆಗೆ ದ್ವಿತೀಯ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಆದರೆ ಈಕೆ ಕ್ವಾರಂಟೈನ್ ಮುಗಿಸಿ ಹೋಂ ಕ್ವಾರಂಟೈನ್ ನಲ್ಲಿ ಇದ್ದಲು ಎನ್ನಲಾಗಿದೆ.
ಜೂ.11ರಂದು ಯಲ್ಲಾಪುರದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಕರೆದೊಯ್ದು, ಬಳಿಕ ಜೂ.13ಕ್ಕೆ ವಾಪಸ್ಸಾಗಿದ್ದ ಬಸ್ ಕಂಡೆಕ್ಟರ್ ಗೆ ಸೋಂಕಿನ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಈತನಿಗೆ ಕ್ವಾರಂಟೈನ್ ವಿಧಿಸಲಾಗಿತ್ತು. ಜೂ.16ಕ್ಕೆ ತಾಲೂಕಾಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಈತನ ಗಂಟಲು ದ್ರವವನ್ನು ಜೂ.18ರಂದು ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.