ಹೊನ್ನಾವರ: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಿದ್ಧ ಕರ್ಕಿ ಪರಂಪರೆಯ ಹಿರಿಯ ಕೊಂಡಿ ನಾರಾಯಣ ಹಾಸ್ಯಗಾರ, ಕರ್ಕಿ ಅವರು ಇಂದು ನಿಧನ ಹೊಂದಿದ್ದಾರೆ.
ನಾಣಿ ಹಾಸ್ಯಗಾರರೆಂದೇ ಯಕ್ಷ ವಲಯದಲ್ಲಿ ಪರಿಚಿತರಾಗಿದ್ದ ರಂಗಸ್ಥಳದ ಮೇಲೆ ಕೃಷ್ಣನ ಪಾತ್ರಕ್ಕೆ ಪರಮಾದ್ಭುತವಾಗಿ ಜೀವ ತುಂಬುತ್ತಿದ್ದ ನಾರಾಯಣ ಹಾಸ್ಯಗಾರ ಅವರು ತಮ್ಮದೇ ವಿಶಿಷ್ಟ ಶೈಲಿಯ ಪಾತ್ರ ನಿರ್ವಹಣೆಯಿಂದ ಮನೆಮಾತಾಗಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗೀಣ ಸೇವೆ ಸಲ್ಲಿಸಿದ್ದ ನಾರಾಯಣ ಹಾಸ್ಯಗಾರರು ‘ಕರ್ಕಿ ಹಾಸ್ಯಗಾರ ಮೇಳ’ದ ಪ್ರಸಿದ್ಧ ಕಲಾವಿದರಾಗಿದ್ದರು.