ಕುಮಟಾ: ಕೊರೋನಾ ಎಂಬುದು ಭೀಕರ ಕಾಯಿಲೆಯಾಗಿದ್ದರೂ ಕೆಲವೊಂದು ನಿಯಮಗಳನ್ನು ಪಾಲಿಸುವುದರಿಂದ ಅದರಿಂದ ದೂರವಿರಲು ಸಾಧ್ಯ. ಹಾಗಾಗಿ ಕೊರೋನಾ ಬಗ್ಗೆ ಭಯ, ಆತಂಕ ಬೇಡ. ಜಾಗೃತಿ ಇರಲಿ ಎಂದು ಖ್ಯಾತ ವೈದ್ಯರೂ, ಭಾರತೀಯ ಕುಟುಂಬ ಯೋಜನಾ ಸಂಘ ಜಿಲ್ಲಾ ಶಾಖೆ ಕುಮಟಾದ ಅಧ್ಯಕ್ಷರಾದ ಡಾ.ಅಶೋಕ ಭಟ್ಟ ಹಳಕಾರ ಹೇಳಿದರು. ಅವರು ಹೊಲನಗದ್ದೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ”ಶಾಲೆಗಳ ಪುನರಾರಂಭಕ್ಕೆ ಪಾಲಕರ ಅಭಿಪ್ರಾಯ ಸಂಗ್ರಹದ ಸಭೆ”ಯಲ್ಲಿಮಾತನಾಡಿದ ಅವರು ಈ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಮನಮುಟ್ಟುವಂತೆ ವಿವರಿಸಿದರು. ಸಭೆಯ ಪ್ರಾರಂಭದಲ್ಲಿ ಎಲ್ಲಾ ಪಾಲಕರ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಅದರ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ವಾಸುದೇವ ಎಮ್ ನಾಯ್ಕ. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯಾಧ್ಯಾಪಕಿ ಪಾರ್ವತಿ ನಾಯ್ಕ, ಹೊಲನಗದ್ದೆ ಗ್ರಾಮಪಂಚಾಯತ್ ಉಪಾಧ್ಯಕ್ಷೆ ಭಾರತಿ ಗುಡೇಅಂಗಡಿ, ಸದಸ್ಯರಾದ ಶಾರದಾ ಪಟಗಾರ, ರಮ್ಯಾ ಶೇಟ್, ಎಸ್.ಡಿ.ಎಮ್.ಸಿ.ಉಪಾಧ್ಯಕ್ಷೆ ರೇಣುಕಾ ಹರಿಕಂತ್ರ.ಉಪಸ್ಥಿತರಿದ್ದರು. ಸಿ.ಆರ್.ಪಿ.ಪ್ರದೀಪ ನಾಯಕ ಇಲಾಖಾ ನಿರ್ದೇಶನಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಶಿಕ್ಷಕ ರವೀಂದ್ರ ಭಟ್ಟ ಸೂರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು. ಭಾರತೀಯ ಕುಟುಂಬ ಯೋಜನಾ ಸಂಘದ ಕಾರ್ಯಕ್ರಮಾಧಿಕಾರಿ ಮಂಜುಳಾ ಗೌಡ, ಸಿಬ್ಬಂದಿಗಳಾದ ಶೆರ್ಲಿ ಆರ್ ಪೀಟರ್, ಶಾಲಿನಿ ಪಿ ನಾಯ್ಕ, ಗೌರಿ ನಾಯ್ಕ ಸಹಕರಿಸಿದರು.