ಮಂಗಳವಾರದಂದು ಮಾನ್ಯ ಸಂಸದರು ಕಾರವಾರದ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ಮತ್ತೊಮ್ಮೆ ದೂರವಾಣಿ ಪರಿಶೀಲನಾ ಸಭೆಯನ್ನು ನಡೆಸಿದರು.

ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಂಸದರು ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಜಿಲ್ಲೆಯ ನಗರ ಹಾಗು ಗ್ರಾಮೀಣ ಪ್ರದೇಶದ ಜನರು ತೊಂದರೆ ಉಂಟಾಗುತ್ತಿದೆ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯೆಕ್ತಪಡಿಸಿದರು.

“ನಾನು ಕಾಟಾಚಾರಕ್ಕೆ ಸಭೆ ನಡೆಸಲು ಬಂದಿಲ್ಲ. ಇವತ್ತು ಸಮಸ್ಯೆ ಬಗೆಹರಿಯಬೇಕು. ಇಲ್ಲವಾದರೆ ಇಲ್ಲೇ ಉಳಿಯಲು ಮನೆಯಿಂದ ಬರುವಾಗ ಬಟ್ಟೆ ಬ್ಯಾಗ್ ತೆಗೆದುಕೊಂಡೆ ಬಂದಿದ್ದೇನೆ ಎಂದು ಸಭೆ ಪ್ರಾರಂಭಿಸುವ ಮೊದಲೇ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸಂಸದರು ಖಡಕ್ ಎಚ್ಚರಿಕೆ ನೀಡಿದ ಅವರು,

ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ೪೦೭ ಪಡಿತರ ಕೇಂದ್ರಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್
ಸಂಪರ್ಕ ಹೊಂದಿದ್ದಾರೆ.

ಇದರಲ್ಲಿ ೨೫೭ ಪಡಿತರ ಕೇಂದ್ರದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬಿಟ್ಟು ಬೇರೆ ಖಾಸಗಿ ಕಂಪನಿಯ ನೆಟ್‌ವರ್ಕ್ ಉಪಯೋಗಿಸುತ್ತಿದ್ದಾರೆ. ಖಾಸಗಿ ಕಂಪನಿಯವರು ಎಷ್ಟು ಒಳ್ಳೆಯ ನೆಟ್‌ವರ್ಕ್ ಸೇವೆ ನೀಡುತ್ತಾರೆ. ನಿಮಗೆ ನಾಚಿಕೆ ಆಗಲ್ಲವಾ? ಎಂದು ಪ್ರಶ್ನಿಸಿದ ಸಂಸದರು ಬಿಎಸ್‌ಎಸ್‌ಎಲ್ ಅಧಿಕಾರಿಗಳ ನಿಧಾನಗತಿಯ ಕಾರ್ಯ ವೈಖರಿ ವಿರುದ್ಧ ಗರಂ ಆದರು.

RELATED ARTICLES  2017ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ

ಇನ್ನೂ ಉಳಿದ ೧೨೪ ಪಡಿತರ ಕೇಂದ್ರಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸರ್ವೀಸ್ ಯಾವ ರೀತಿ ನೀಡುತ್ತಿದ್ದಾರೆ. ಅದರ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ಇಂಟರ್‌ನೆಟ್ ಸೇವೆ ಮಂದಗತಿಯಲ್ಲಿದ್ದು, ಇದರಿಂದ ಸಾರ್ವಜನಿಕರ ಕೆಲಸ ವಿಳಂಭವಾಗುತ್ತಿದೆ. ಸರ್ಕಾರದ ಯೋಜನೆ ಯಶಸ್ವಿಯಾಗುವಲ್ಲಿ ಬಿಎಸ್‌ಎನ್‌ಎಲ್ ಕಾರ್ಯ ನಿರ್ವಹಿಸುವಲ್ಲಿ ಸಕ್ರಿಯವಾಗಬೇಕು. ನೆಟ್‌ವರ್ಕ್ ವೇಗ ಹೆಚ್ಚಿಸಬೇಕು. ಎಲ್ಲ ಪಂಚಾಯತಗಳಿಗೆ ಸಂಪರ್ಕವನ್ನು ಜುಲೈ ೧೫ರೊಳಗೆ ಕಾರ್ಯಗತಗೊಳಿಸಬೇಕು. ಕಳಪೆ ಮಟ್ಟದ ಕನೆಕ್ಷನ್ ಸರಿಪಡಿಸಿ ಉತ್ತಮ ಮಟ್ಟದ ಬ್ರಾಡ್‌ಕಾಸ್ಟ್ ಒದಗಿಸುವ ವ್ಯವಸ್ಥೆ ಶೀಘ್ರವೇ ಜಾರಿಯಾಗಬೇಕು.

RELATED ARTICLES  ಇಂದು ಉತ್ತರಕನ್ನಡದಲ್ಲಿ 41 ಮಂದಿಗೆ ಕೊರೋನಾ ಪಾಸಿಟೀವ್...!

ಪ್ರತಿ ತಿಂಗಳು ಜಿಲ್ಲಾ ಪಂಚಾಯತ ಜೊತೆಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳು ಸಭೆ ನಡೆಸಿ ವರದಿಯನ್ನು ಸಲ್ಲಿಸಬೇಕು ಎಂದು ಸಂಸದರು ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ಟವರ್ ಗಳು, ಪವರ್ ಸಪ್ಲೈ ಮೆಂಟೆನೆನ್ಸ್ ಪ್ರಾಬ್ಲಮ್ ಎಲ್ಲವನ್ನೂ ಜೂಲೈ ೧೫ರೊಳಗೆ ಸಮಸ್ಯೆ ಬಗೆಹರಿಸಿ ಉತ್ತಮ ಮಟ್ಟದ ನೆಟ್ ವರ್ಕ್ ಸಂಪರ್ಕವನ್ನು ಒದಗಿಸುವುದಾಗಿ ಕರ್ನಾಟಕ ಸಿ ಜಿ ಎಂ ಅವರಿಗೆ ಭರವಸೆ ನೀಡಿದರು.

ಸಭೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್. ನಾಯ್ಕ, ಜಿಲ್ಲಾಧಿಕಾರಿ ಡಾ. ಹರೀಶಕುಮಾರ ,ಜಿಲ್ಲಾ ಪಂಚಾಯತ ಸಿಇಒ ಎಂ.ರೋಷನ್, ಬಿಎಸ್‌ಎನ್‌ಎಲ್ ಅಧಿಕಾರಿಗಳು ಸೇರಿದಂತೆ ಹಲವು ಇಲಾಖೆಗಳ ಉನ್ನತ ಅಧಿಕಾರಿಗಳು ಹಾಜರಿದ್ದರು.