ಕಾರವಾರ : ಜಿಲ್ಲೆಯಿಂದ ವಿವಿಧ ಕೌಶಲ್ಯವನ್ನು ಹೊಂದಿದ ವ್ಯಕ್ತಿಗಳು ಹಾಗೂ ಕಾರ್ಮಿಕರು ಕೋವಿಡ್-19ನಿಂದಾಗಿ ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶಗಳಿಂದ ಮರಳಿ ಬಂದಿರುತ್ತಾರೆ. ಅಂತಹವರಿಗೆ ಅವರ ಕೌಶಲ್ಯ ಆಧರಿಸಿ ಸ್ಥಳೀಯ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿರುತ್ತಾರೆ.

RELATED ARTICLES  ದಿನಾಂಕ 30/06/2019 ರ ದಿನ ಭವಿಷ್ಯ ಇಲ್ಲಿದೆ.

ಆದ್ದರಿಂದ ಅಂತಹ ವ್ಯಕ್ತಿಗಳು ತಮ್ಮ ವ್ಯಕ್ತಿಕ ಮಾಹಿತಿಯನ್ನು ಸ್ಥಳೀಯ ಕೈಗಾರಿಕಾ ಘಟಕಗಳಿಗೆ ಅನುಭವಿ ಕಾರ್ಮಿಕರು, ತಂತ್ರಜ್ಞರು ದೂರವಾಣಿ ಸಂಖ್ಯೆಯೊಂದಿಗೆ ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಶಿರವಾಡ ಇವರನ್ನು ಸಂಪರ್ಕಿಸಬಹುದಾಗಿದೆ.

RELATED ARTICLES  ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಕೆ.ಆರ್. ರಮೇಶ್ ಕುಮಾರ್ ರಾಜೀನಾಮೆ.

ಜಿಲ್ಲೆಯಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಲು ಅವಕಾಶವಿದ್ದು, ದೂರವಾಣಿ ಸಂಖ್ಯೆ: 08382-282302, ಮೊಬೈಲ್ ಸಂಖ್ಯೆ: 9481372678, 9611091333, 98800158571, , ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ಶಿರವಾಡ, ಕಾರವಾರ ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.