ಭಟ್ಕಳ : ಮೀನು ತುಂಬಿದ ವಾಹನದಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಪ್ರಕರಣ ಭೇದಿಸಿರುವ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ ಬಳಿ ಸಂಭವಿಸಿದೆ.
ಹುಬ್ಬಳ್ಳಿಯಿoದ ಬರುತ್ತಿದ್ದ ಮೀನು ತುಂಬಿದ ಲಾರಿಯಲ್ಲಿ ೫೦೦ ಕೆ.ಜಿ ದನದ ಮೌಂಸ ಇದ್ದು, ಮೇಲೆ ನೋಟಕ್ಕೆ ಪ್ಲಾಸ್ಟಿಕ್ ಖಾಲಿ ಬಾಕ್ಸ ನಲ್ಲಿ ಮೀನು ತುಂಬಿ ಯಾರಿಗೂ ಅನುಮಾನ ಬರದಂತೆ ಸಾಗಟ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಮೂಲದ ಆರೋಪಿ ಜಾಲಕ ಉಮರ್ ಫಾರುಖ ಆದಂ ಸಾಬ್ ಮುಲ್ಲಾ, ಹಾಗೂ ಇನೊಬ್ಬ ಆರೋಪ ಮೈನುದ್ದಿನ್ ಹಜರತ್ ಅಲಿ ಧಾರವಾಡ ಇವರನ್ನು ಭಂದಿಸಲಾಗಿದೆ.