ಅಂಕೋಲಾ: ಒಂದೆಡೆ ಕೊರೋನಾ ಹಾವಳಿ ಹೆಚ್ಚುತ್ತಲೇ ಇದ್ದರೆ ಇನ್ನೊಂದೆಡೆ ಉತ್ತರ ಕನ್ನಡ ಜನತೆಯನ್ನೂ ಮತ್ತೆ ಮತ್ತೆ ಭಯದ ಗೂಡಿಗೆ ತಳ್ಳಿದೆ. ಹೌದು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗ್ರಗೋಣ ಗ್ರಾಮದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು. ಇದೀಗ ಆತನ ಟ್ರಾವೆಲ್ ಹಿಸ್ಟರಿ ಜನತೆಯನ್ನ ಬೆಚ್ಚಿ ಬಿಳಿಸುವಂತೆ ಮಾಡಿದೆ.
ಜೂ 16ರ ಸುಮಾರಿಗೆ ಹೊರ ರಾಜ್ಯದಿಂದ ಊರಿಗೆ ಬಂದಿದ್ದ ವ್ಯಕ್ತಿ. ಮೊನ್ನೆ 23ರಂದು ಜ್ವರ ಕಾಣಿಸಿಕೊಂಡು ಅಂಕೋಲಾದ ಖಾಸಗಿ ಆಸ್ಪತ್ರೆಗೆ ಹೋಗಿ ಬಂದಿದ್ದಾನೆ. ಆದರೆ ಈಗ ಆತನಿಗೆ ಪಾಸಿಟಿವ್ ಇರುವ ಬಗ್ಗೆ ಗೊತ್ತಾಗಿದೆ.
ಅಗ್ರಗೋಣದ ವ್ಯಕ್ತಿಗೆ ಪಾಸಿಟಿವ್ ಇದೆ ಎನ್ನುವುದು ತಿಳಿಯುತ್ತಿದ್ದಂತೆ ಅಂಕೋಲಾ ಜನತೆ ತಲೆ ಕೆಡಿಸಿಕೊಂಡಿದ್ದಾರೆ.