ಹೊನ್ನಾವರ : ಉತ್ತರ ಕನ್ನಡಕ್ಕೆ ಮುಬೈನಿಂದ ಬಂದವರಿಗೆ ಕೊರೋನಾ ಕಾಣಿಸುತ್ತಿದ್ದು ಇಂದೂ ಸಹ ಅದೇ ರೀತಿಯ ಪ್ರಕರಣ ವರದಿಯಾಗಿದೆ.
ಜೂನ್ 21 ಮುಂಬೈನಿಂದ ಆಗಮಿಸಿ ಖಾಸಗಿಯಾಗಿ ಹೊಟೇಲ್ ಕ್ವಾರಂಟೈನಲ್ಲಿದ್ದ ತಂದೆ ಹಾಗೂ ಮಗುವಿಗೆ ಕೊರೋನಾ ಪಾಸಟಿವ್ ಬಂದಿದೆ ಎನ್ನಲಾಗಿದೆ.
ಗಂಡ ಹೆಂಡತಿ ಹಾಗೂ ಮಗು ಒಟ್ಟಿಗೆ ಮೂವರು ಮುಂಬೈನಿಂದ ಆಗಮಿಸಿದ್ದರು. ಅದರಲ್ಲಿ 37 ವರ್ಷದ ಪುರುಷ ಹಾಗೂ 02 ವರ್ಷದ ಮಗುವಿಗೆ ಕೊರೋನಾ ಪಾಸಟಿವ್ ಬಂದಿದೆ. ಇನ್ನು ಆ ವ್ಯಕ್ತಿಯ ಮಡದಿಯ ವರದಿ ಬರಬೇಕಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ ಬಗ್ಗೆ ವರದಿಯಾಗಿದೆ.