ಕುಮಟಾ:ಕುಮಟಾದ ಸತ್ಯನಾರಾಯಣ ಸ್ಟೋರ್ಸ್ ಬಟ್ಟೆ ಅಂಗಡಿಗೆ ಜೂನ್ 23 ರಂದು ಅಗ್ರಗೋಣ ಸೋಂಕಿತನ ಮಗಳು ಮೂವರು ಯುವತಿಯರ ಜೊತೆಗೆ ಬಂದಿದ್ದು ಬೆಳಿಗ್ಗೆ ಸುಮಾರು 11 ಘಂಟೆಗೆ ಕುಮಟಾ ಬಸ್ ನಿಲ್ದಾಣದಿಂದ ಆಟೋ ಮೂಲಕ ಕುಮಟಾದ ಸತ್ಯನಾರಾಯಣ ಸ್ಟೋರ್ಸ್ ಗೆ ಬಟ್ಟೆ ಖರೀದಿ ಮಾಡಲು ತೆರಳಿರುವುದಾಗಿ ತಿಳಿದು ಬಂದಿದೆ.
ನಂತರ ಸತ್ಯನಾರಾಯಣ ಸ್ಟೋರ್ಸ್ ನ ಪಕ್ಕದ ಚಪ್ಪಲಿ ಅಂಗಡಿಯಲ್ಲಿ ಚಪ್ಪಲಿ ಖರಿದಿಸಿ ತದನಂತರ ಹತ್ತಿರದ ರುಚಿ ಹೊಟೆಲ್ ನಲ್ಲಿ ತಿಂಡಿ ತಿಂದು ಸ್ಥಳೀಯವಾಗಿ ಓಡಾಡಿದ್ದಾರೆ. ಮದ್ಯಾಹ್ನ ಸುಮಾರು ಮಧ್ಯಾಹ್ನ 2 ಘಂಟೆಯಿಂದ 2:30 ರ ವೇಳೆ ಅಲ್ಲಿಂದ ಆಟೋ ಒಂದರಲ್ಲಿ ಹೊಸ ಬಸ್ ನಿಲ್ದಾಣಕ್ಕೆ ಹೋಗಿ ನಂತರ ಅಲ್ಲಿಂದ ಅಗ್ರಗೊಣ ತೆರಳಿರುವ ಕುರಿತು ಮಾಹಿತಿ ದೊರಕಿದ್ದು ಜೂನ್ 23 ರಂದು ನಾಲ್ವರು ಯುವತಿಯರು ಈ ಮಾರ್ಗದಲ್ಲಿ ಓಡಾಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಟೋ ರಿಕ್ಷಾದವರು ಚಾಲಕರು ಯಾರೇ ಇದ್ದರೂ ಕುಮಟಾ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೂರವಾಣಿ ಸಂಖ್ಯೆ: 08386222333
ಸತ್ಯನಾರಾಯಣ ಸ್ಟೋರ್ ಪ್ರಕಟಣೆ
ಇಂದು ಕರೊನಾ ಸೋಂಕು ದೃಢಪಟ್ಟ ಅಂಕೋಲಾದ ವ್ಯಕ್ತಿಯ ಸಂಪರ್ಕದಲ್ಲಿದ್ದಾರೆ ಎನ್ನಲಾದ ಗ್ರಾಹಕರು ನಮ್ಮ ಶೋರೂಮ್ ಗೆ ಭೇಟಿ ನೀಡಿದ್ದು, ಈ ಹಿನ್ನಲೆಯಲ್ಲಿ ನಮ್ಮ ಅಂಗಡಿಯನ್ನು ಜೂನ್ 26 ರಿಂದ ಒಂದೆರಡುದಿನದ ವರೆಗೆ ಬಂದ್ ಮಾಡಲಾಗಿದೆ. ನಮ್ಮ ಶೋರೂಮ್ ಸೀಲ್ ಡೌನ್ ಆಗಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ತಾತ್ಕಾಲಿಕವಾಗಿ ಒಂದೆರಡುದಿನ ಬಂದ್ ಮಾಡಲಾಗಿದೆ.
ಸರ್ಕಾರದ ನಿರ್ದೇಶನದಂತೆ ಗ್ರಾಹಕರ ಮತ್ತು ಸಿಬ್ಬಂದಿಗಳ ಆರೋಗ್ಯದ ದೃಷ್ಠಿಯಿಂದ ಪ್ರತಿದಿನವೂ ಥರ್ಮಲ್ ಸ್ಕ್ಯಾನಿಂಗ್ ಮತ್ತಿತರ ಮುಂಜಾಗೃತಾ ಕ್ರಮಗಳನ್ನು ಪಾಲಿಸಿಯೇ ವ್ಯಾಪಾರ-ವಹಿವಾಟು ನಡೆಸಲಾಗಿದೆ. ಹೀಗಾಗಿ ಯಾರು ಭಯಪಡುವ ಅಗತ್ಯವಿಲ್ಲ. ಗಾಳಿ ಸುದ್ದಿಗೆ ಕಿವಿಗೊಡಬಾರದೆಂದು ವಿನಂತಿ. -ಸತ್ಯನಾರಾಯಣ ಸ್ಟೋರ್ಸ್ ಕುಮಟಾ, ಆಡಳಿತ ಮಂಡಳಿ