ಕುಮಟಾ : ಸೋಂಕು ಕಾಣಿಸಿಕೊಳ್ಳುವ ಮೊದಲು ಅಂಕೋಲಾದ ವ್ಯಕ್ತಿ ಕುಮಟಾದ ಆಸ್ಪತ್ರೆ ಮತ್ತು ಗೋಕರ್ಣದ ಆಸ್ಪತ್ರೆಗೆ ತೆರಳಿ ನೀಡಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದ್ದು ಆ ವಿಷಯ ಬೇರೆ ಬೇರೆ ರೀತಿಯಲ್ಲಿ ಹರಿದಾಡಿ ಜನರಿಗೆ ಆತಂಕ ಸೃಷ್ಟಿಸಿತ್ತು.
ನಂತರ ಅಂಕೋಲಾ ವ್ಯಕ್ತಿಗೆ ಕೊರೋನಾ ಸೋಂಕು ದೃಢಪಟ್ಟ ಬಳಿಕ ಆತನ ಟ್ರಾವೆಲ್ ಹಿಸ್ಟರಿ ಕಂಡು ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆತನಿಗೆ ಚಿಕಿತ್ಸೆ ನೀಡಿದ್ದ ಕೆನರಾ ಹೆಲ್ತ್‌ಕೇರ್ ನ ವೈದ್ಯರ ವರದಿ ಮತ್ತು ಆತನಿಗೆ ಟ್ರೀಟ್‍ಮೆಂಟ್ ನೀಡಿದ್ದ ಉಳಿದ ನಾಲ್ವರು ವೈದ್ಯರ ವರದಿ ನೆಗೆಟಿವ್ ಬಂದಿದೆ. ಜೊತೆಗೆ ಈತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಕುಟುಂಬಸ್ಥರ ವರದಿಯೂ ನೆಗೆಟಿವ್ ಎಂಬ ಮಾಹಿತಿ ಲಭ್ಯವಾಗಿದ್ದು ಇದು ಕುಮಟಾ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಈಮಧ್ಯೆ ಗಾಳಿ ಸುದ್ದಿಗಳಿಗೆ ಜನತೆ ಕಿವಿಗೊಡದಂತೆ ವೈದ್ಯಾಧಿಕಾರಿಗಳು ಹಾಗೂ ಅಧಿಕಾರಿಗಳು ಜನತೆಯಲ್ಲಿ ಮನವಿ ಮಾಡಿದ್ದಾರೆ.