ಶಿರಸಿ : ತಾಲೂಕಿನ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದ್ದು, ಶಿರಸಿ ಉಪವಿಭಾಗದ ಪೊಲೀಸರು ಹಾಗೂ ಇತರ ಸಿಬ್ಬಂದಿಗಳಿಗೆ ಆತಂಕ ಎದುರಾಗಿದೆ.
ಸೋಂಕಿನ ಲಕ್ಷಣ ಹೊಂದಿದ್ದ ಈತನಿಗೆ ಪರೀಕ್ಷೆ ನಡೆಸಲು ನ್ಯಾಯಾಧೀಶರು ಕೂಡ ಸೂಚಿಸಿದ್ದರು ತದ ನಂತರ ಗಂಟಲು ದ್ರವ ಪಡೆದು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿರುವುದಾಗಿ ಇಂದು ವರದಿ ಬಂದಿದೆ ಎನ್ನಲಾಗಿದೆ.