ಕುಮಟಾ: ಪ್ರಸ್ತುತ ವರ್ಷದ ಶಾರ್ವರಿ ಸಂವತ್ಸರದ ಪವಿತ್ರ ಚಾರ್ತುಮಾಸ ವೃತವನ್ನು ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿಗಳು ಹಾಗೂ ಶಿಷ್ಯ ಸ್ವಾಮೀಜಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದಂಗಳವರ ಸಾಂಗತ್ಯದಲ್ಲಿ ಕೇಂದ್ರ ಮಠವಾದ ಪರ್ತಗಾಳಿ ಗೋವಾದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಜು.10 ರಿಂದ ಸೆ.2 ರ ತನಕ ಆಚರಿಸಲು ನಿರ್ಧರಿಸಿರುತ್ತಾರೆ.


ಪ್ರಸ್ತುತ ವಿಶ್ವವ್ಯಾಪಿ ಪಸರಿಸಿರುವ ಕೊರೊನಾ ಮಹಾಮಾರಿಯ ಸ್ಫೋಟದ ಹಿನ್ನೆಲೆಯಲ್ಲಿ ಮತ್ತು ಅದಕ್ಕನುಸರಿಸಿ ಮಾನ್ಯ ಸರಕಾರದ ಆದೇಶ ಮತ್ತು ಮುಂಜಾಗೃತಾ ಕ್ರಮಗಳ ಪಾಲನೆಯ ಉದ್ದೇಶದಿಂದ ಈ ವರ್ಷ ಚಾರ್ತುಮಾಸ ವೃತಾಚರಣೆಯು ಸರಳ ರೀತಿಯಲ್ಲಿ ಜರುಗಲಿದೆ. ಗೋವಾ ಗಡಿಗಳಲ್ಲಿ ಕಟ್ಟುನಿಟ್ಟಿನ ನಾಕಾ ಬಂದಿ ಇರುವುದರಿಂದ ಈ ಪರಿಸ್ಥಿತಿಯಲ್ಲಿ ಬೇರೆ ರಾಜ್ಯಗಳಿಂದ ಪರ್ತಗಾಳಿ ಮಠಕ್ಕೆ ಹೋಗಿ ಬರಲು ಶಿಷ್ಯವರ್ಗಕ್ಕೆ ಅಸಾಧ್ಯ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ವಸ್ತು ಸ್ಥಿತಿಯನ್ನು ಮನಗಂಡು ಅಭಿಮಾನಿ ಶಿಷ್ಯವರ್ಗದವರು, ಚಾರ್ತುಮಾಸ ಅವಧಿಯಲ್ಲಿ ದೇವ ಗುರು ಸೇವೆ ಮಾಡಲೋಸುಗ ಪರ್ತಗಾಳಿ ಮಠಕ್ಕೆ ಬಂದು ಹೋಗುವ ಪ್ರಯಾಸ, ಪರಿಶ್ರಮವನ್ನು ವಹಿಸಬೇಕಾಗಿಲ್ಲ ಎಂಬ ಸಂದೇಶವನ್ನು ಶ್ರೀಗಳವರು ಗೌಡ ಸಾರಸ್ವರ ಸಮಾಜಕ್ಕೆ ನೀಡಿದ್ದಾರೆ. ಸಮಾಜ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಸುರಕ್ಷಿತ ಇದ್ದು, ಶ್ರೀ ಹರಿ-ಗುರುಗಳ ಅನುಗೃಹವನ್ನು ಪ್ರಾರ್ಥಿಸಿ ಶ್ರೀಗಳವರ ಕೃಪಾರ್ಶೀವಾದವನ್ನು ಪಡೆಯಬೇಕಂತ ಕೇಂದ್ರ ಮಠದ ಅಧ್ಯಕ್ಷ ಶ್ರೀ ಶ್ರೀನಿವಾಸ ವಾಸುದೇವ ಶೇಣವಿ ದೆಂಪೋ ಇವರು ವಿದಿತ ಪಡಿಸಿರುವದಾಗಿ ಮಠದ ಅನುಯಾಯಿಗಳಾದ ಶ್ರೀ ಕೃಷ್ಣ ಬಾಬಾ ಪೈ ಅವರು ತಿಳಿಸಿದ್ದಾರೆ.

RELATED ARTICLES  ಇಂದು 3 ರಾಜ್ಯಗಳಲ್ಲಿ ಕಾಂಗ್ರೆಸ್ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ.