ಕಾರವಾರ: ಕರೊನಾ ರೋಗಿ ಆಸ್ಪತ್ರೆಯಿಂದ ನಾಪತ್ತೆಯಾಗಿ ಆತಂಕ ಮೂಡಿಸಿದ ಘಟನೆ ಸೋಮವಾರ ನಡೆದಿದೆ. ಬೈಕ್ ಕಳ್ಳತನ ಆರೋಪದ ಮೇಲೆ ಶಿರಸಿ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿಗೆ ಕರೊನಾ ಸೋಂಕು ಭಾನುವಾರ ದೃಢಪಟ್ಟಿತ್ತು.
ಇದರಿಂದ ಶಿರಸಿ ನಗರ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. 6 ಜನ ಪೊಲೀಸರು, ನ್ಯಾಯಾಧೀಶರನ್ನು, ನ್ಯಾಯಾಲಯದ ನಾಲ್ವರು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು.
ಆತನನ್ನು ಕಾರವಾರ ಕ್ರಿಮ್ಸ್ ಕರೊನಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಸೋಮವಾರ ಬೆಳಗಿನಜಾವ ಕಳ್ಳ ಇಬ್ಬರು ಸಹ ರೋಗಿಗಳ ಮೊಬೈಲ್ ಕದ್ದು, ಗ್ಲಾಸ್ ಒಡೆದು ನಾಪತ್ತೆಯಾಗಿದ್ದ. 11 ಗಂಟೆಯ ಬಳಿಕ ಆತನನ್ನು ಕದ್ರಾ ರಸ್ತೆಯಲ್ಲಿ ಸಾಕಳಿ ಬ್ರಿಜ್ ಸಮೀಪ ಬಂಧಿಸಲಾಗಿದೆ.