ಗೋಕರ್ಣ: ಮಗನಿಗಿದ್ದ ನಾಗದೋಷ ನಿವಾರಣೆಗೆಂದು ಗೋಕರ್ಣಕ್ಕೆ ಬಂದಿದ್ದ ಧಾರವಾಡ ಮೂಲದ ಶಿವಪ್ಪ ಎನ್ನುವವರು ಕೋಟಿತೀರ್ಥದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇದೀಗ ವರದಿಯಾಗಿದೆ.
ಕುಟುಂಬ ಸಮೇತ ಗೋಕರ್ಣಕ್ಕೆ ಬಂದಿದ್ದ ಶಿವಪ್ಪ, ಕೋಟಿತೀರ್ಥ ಬಳಿ ಅರ್ಚಕರೊಬ್ಬರ ಮನೆಯಲ್ಲಿ ಪೂಜೆ ಮಾಡಿಸಿ, ಊಟ ಮಾಡಿ ಕೋಟಿ ತೀರ್ಥದಲ್ಲಿ ಈಜಲು ತೆರಳಿದ್ದರೆನ್ನಲಾಗಿದೆ.
ಗೋಕರ್ಣ ಪೊಲೀಸರು ಬೋಟ್ ಸಹಾಯದಿಂದ ಮುಳುಗಿದ್ದ ವ್ಯಕ್ತಿಯ ಶವವನ್ನು ಹೊರತೆಗೆದಿದ್ದಾರೆ.