ಕಾರವಾರ: ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ 37, ಹಾಗೂ 51 ವರ್ಷದ ಪುರುಷ 83 ವರ್ಷದ ವೃದ್ಧೆ, ಮತ್ತು 26 ವರ್ಷದ ಇಬ್ಬರು ಯುವಕರಿಗೆ ಸೋಂಕು ದೃಢಪಟ್ಟಿದೆ. ಇದಲ್ಲದೇ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವಕನಿಗೆ ಸೋಂಕು ತಗುಲಿದ್ದು ಸೋಂಕಿನ ಮೂಲವನ್ನ ಪತ್ತೆಹಚ್ಚಲಾಗುತ್ತಿದೆ.
ಯಲ್ಲಾಪುರದ ಸೋಂಕಿತ ಕಂಡಕ್ಟರ್ ಸಂಪರ್ಕಕ್ಕೆ ಬಂದಿದ್ದ 26, 28, 26, 33, 42 ವರ್ಷದ ಪುರುಷರಿಗೆ ಹಾಗೂ 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. ಅಲ್ಲದೇ ಗೋವಾದಿಂದ ವಾಪಾಸ್ ಆಗಿದ್ದ 33 ವರ್ಷದ ವ್ಯಕ್ತಿಗೆ ಸಹ ಸೋಂಕು ದೃಢಪಟ್ಟಿದೆ.
ಹೊನ್ನಾವರದಲ್ಲಿ ಮುಂಬೈನಿಂದ ವಾಪಾಸ್ ಆಗಿದ್ದ 35 ಹಾಗೂ 65 ವರ್ಷದ ಮಹಿಳೆಯರಿಗೆ ಜೊತೆಗೆ 39, 31,53, 29 ವರ್ಷದ ಪುರುಷರಿಗೆ ಸೋಂಕು ದೃಢಪಟ್ಟಿದೆ.
ಇನ್ನು ಗೋವಾ ಸೋಂಕಿತರ ಸಂಪರ್ಕಕ್ಕೆ ಬಂದಿರುವ ಕಾರವಾರದ 23 ಹಾಗೂ 25 ವರ್ಷದ ಯುವಕರಿಗೆ ಸೋಂಕು ದೃಢಪಟ್ಟಿದೆ. ಭಟ್ಕಳದಲ್ಲಿ ಆಂದ್ರಪ್ರದೇಶದ ವಿಜಯವಾಡದಿಂದ ವಾಪಾಸ್ ಆಗಿದ್ದ 50 ವರ್ಷದ ಪುರುಷನಿಗೆ, ಮುಂಬೈನಿಂದ ವಾಪಾಸ್ ಆಗಿದ್ದ ಕುಮಟಾ ತಾಲೂಕಿನ ಮಾದನಗೇರಿಯ 30 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು ಗರಿಷ್ಟ ಕೊರೋನಾ ಪ್ರಕರಣಗಳು ವರದಿಯಾಗಿದ್ದು 24 ಮಂದಿಗೆ ಸೋಂಕು ದೃಢಪಟ್ಟಿದೆ.